ಗಿನ್ನಿಸ್ ದಾಖಲೆಯ ವೀರ ಗೋಪಾಲ್ ಖಾರ್ವಿ ರಾಷ್ಟ್ರಮಟ್ಟಕ್ಕೆ ಆಯ್ಕೆ

(ನ್ಯೂಸ್ ಕಡಬ)newskadaba.com ಕುಂದಾಪುರ, ಅ. 09. 25ನೇ ಸ್ಟೇಟ್ ಮಾಸ್ಟರ್ ಸ್ವಿಮ್ಮಿಂಗ್ ಚಾಂಪಿಯನ್ ಶಿಪ್ ಇವರು ಆಯೋಜಿಸಿದ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಗುಂಡ್ಮಿ ನಿವಾಸಿ ಗೋಪಾಲ್ ಖಾರ್ವಿ ಕೋಡಿ-ಕನ್ಯಾಣ ಮಧ್ಯಪ್ರದೇಶದ ಭೂಪಾಲ್‌ನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಇವರು 400ಮೀ ಫ್ರೀಸ್ಟೈಲ್ ಚಿನ್ನದ ಪದಕ, 50ಮೀ ಬಟರ್ ಫ್ಲೈ ಚಿನ್ನದ ಪದಕ, 200ಮೀ ಫ್ರೀಸ್ಟೈಲ್ ಬೆಳ್ಳಿ ಪದಕ, 100ಮೀ ಫ್ರೀಸ್ಟೈಲ್ ಬೆಳ್ಳಿ ಪದಕ, 4×50 ಫ್ರೀಸ್ಟೈಲ್ ರಿಲೇ ಬೆಳ್ಳಿ ಪದಕ, 4×100 ಮಿಡ್ಲೆ ರಿಲೇಯಲ್ಲಿ ಬೆಳ್ಳಿ ಪದಕ ಪಡೆದಿರುತ್ತಾರೆ. ಒಟ್ಟು 6 ಪದಕಗಳನ್ನು ಪಡೆದಿರುತ್ತಾರೆ. ಇವರು ಉಡುಪಿಯ ಅಜ್ಜರಕಾಡು ಈಜು ಕೊಳದ ತರಬೇತುದಾರರಾಗಿರುತ್ತಾರೆ. 2013 ರಲ್ಲಿ ಕೈ ಕಾಲುಗಳನ್ನು ಕೋಳದಿಂದ ಬಂಧಿಸಿ ಅರಬ್ಬೀ ಸಮುದ್ರದಲ್ಲಿ 3.71 ಕಿ.ಮೀ. ಈಜಿ ಗಿನ್ನಿಸ್ ವಿಶ್ವ ದಾಖಲೆ ಮಾಡಿದ್ದಾರೆ.

Also Read  ಮನೆ, ಪ್ರಾಣ ಹಾನಿ ಪ್ರಕರಣಗಳಲ್ಲಿ 48 ಗಂಟೆಯೊಳಗೆ ಪರಿಹಾರ ಒದಗಿಸುವಂತೆ ಸಿಎಂ ಸೂಚನೆ

 

error: Content is protected !!
Scroll to Top