SSLC ಪಾಸಾದವರಿಗೆ 39,481 ಹುದ್ದೆಗಳ ಲಭ್ಯತೆ- ಅ.14 ಅರ್ಜಿ ಸಲ್ಲಿಸಲು ಕೊನೇ ದಿನ

(ನ್ಯೂಸ್ ಕಡಬ)newskadaba.com ನವದೆಹಲಿ, ಅ. 09. ವಿವಿಧ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (CAPF) ಮತ್ತು ಅರೆಸೈನಿಕ ಸಂಸ್ಥೆಗಳಲ್ಲಿ ಒಟ್ಟು 39,481 ಹುದ್ದೆಗಳು ಖಾಲಿ ಇದ್ದು, ಇವುಗಳನ್ನು ತುಂಬಲು ಅರ್ಜಿ ಕರೆಯಲಾಗಿದೆ. ಎಸ್‌ಎಸ್‌ಎಲ್‌ಸಿ (SSLC) ಪಾಸಾದವರು ಇದಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

 

ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್ಸಿ) ಜಿಡಿ ಕಾನ್ಸ್ಟೇಬಲ್ 2025 ನೇಮಕಾತಿ ಅಭಿಯಾನದ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ಪ್ರತಿಷ್ಠಿತ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ ಈಗ ಮುಕ್ತವಾಗಿದೆ. ಸೆಪ್ಟೆಂಬರ್ 5 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಕ್ಟೋಬರ್ 14, 2024 ರವರೆಗೆ ಸ್ವೀಕರಿಸಲಾಗುತ್ತದೆ. ಅಭ್ಯರ್ಥಿಗಳು ನೋಂದಣಿ ಪ್ರಕ್ರಿಯೆಗಾಗಿ ಎಸ್‌ಎಸ್ಸಿಯ ಅಧಿಕೃತ ವೆಬ್ ಸೈಟ್ ಗೆ ಅಂದರೆ ssc.gov.in ಭೇಟಿ ನೀಡಬಹುದು.

Also Read  1 ವರ್ಷದ ಮಗುವಿನ ತಲೆಗೆ ಸಿಕ್ಕಿಕೊಂಡ ಪ್ರೆಶರ್‌ ಕುಕ್ಕರ್‌ ➤ ಮುಂದೇನಾಯಿತು ಗೊತ್ತೆ...???

 

error: Content is protected !!
Scroll to Top