ಅರಣ್ಯ ಇಲಾಖೆ ವತಿಯಿಂದ ಕಡಬ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ

(ನ್ಯೂಸ್ ಕಡಬ)newskadaba.com ಕಡಬ, ಅ. 08. ಕರ್ನಾಟಕ ಅರಣ್ಯ ಇಲಾಖೆ ಕರ್ನಾಟಕ ರಾಜ್ಯ ಉಪವಲಯ ಅರಣ್ಯ ಅಧಿಕಾರಿಗಳ ಸಂಘ ಮಂಗಳೂರು ವಿಭಾಗ ದಕ್ಷಿಣ ಕನ್ನಡ ಜಿಲ್ಲೆ ಇದರ ವತಿಯಿಂದ ವನ್ಯಜೀವಿ ಸಪ್ತಹ ಪ್ರಯುಕ್ತ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆಯ ಆಯ್ಕೆಯ ಸಲುವಾಗಿ ಕಡಬ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯು ಸೈಂಟ್ ಜೋಕಿಮ್ ಸಭಾಭವನದಲ್ಲಿ ನಡೆಯಿತು.

ವಲಯ ಅರಣ್ಯ ಅಧಿಕಾರಿ ಸುಬ್ರಹ್ಮಣ್ಯ ವಲಯ ಶ್ರೀ ವಿಮಲ್ ಬಾಬು ಇವರು ಅಧ್ಯಕ್ಷತೆಯನ್ನು ವಹಿಸಿ ಪರಿಸರ ಸಂರಕ್ಷಣೆಯ ಮತ್ತು ವನ್ಯಜೀವಿಗಳ ಮಹತ್ವದ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಶ್ರೀ ಸಂತೋಷ್  ರೈ ಗೌರವಧ್ಯಕ್ಷರು ಉಪ ವಲಯ ಅರಣ್ಯ ಅಧಿಕಾರಿಗಳ ಸಂಘ ಮಂಗಳೂರು ಹಾಗೂ ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆಗಳ ಚಿತ್ರಕಲಾ ಶಿಕ್ಷಕ ಶ್ರೀ ಸತೀಶ್ ಪಂಜ ಉಪಸ್ಥಿತರಿದ್ದರು. ಶ್ರೀ ಅಂಟೋನಿ ಮರಿಯಪ್ಪ ಡಿ.ಸಿ.ಎಫ್ ಮಂಗಳೂರು ವಿಭಾಗ ಇವರು ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಅರಿವು ಮೂಡಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಪ್ರವೀಣ್ ಕುಮಾರ್ ಪಿಎನ್ ಎ. ಸಿ. ಎಫ್ ಸುಬ್ರಹ್ಮಣ್ಯ ಉಪ ವಿಭಾಗ ಸುಳ್ಯ, ಶ್ರೀ ಯಶೋಧರ ಡಿ ವೈ ಆರ್ ಎಫ್ ಪಂಜ ವಲಯ, ಶ್ರೀ ಅಜಿತ್ ಕುಮಾರ್ ಡಿ ವೈ ಆರ್ ಎಫ್ ಪಂಜ ವಲಯ, ಶ್ರೀ ಪ್ರಕಾಶ್ ಅಗಸಿ ಮನಿ ಪಂಜ ವಲಯ, ಶ್ರೀ ಯೋಗೀಶ್ ಜಿ. ಸಿ  ಡಿ ವೈ ಆರ್ ಎಫ್ ಸುಬ್ರಹ್ಮಣ್ಯ ವಲಯ, ಶ್ರೀ ಮೋತಿಲಾಲ್ ಡಿ ವೈ ಆರ್ ಎಫ್ ಸುಬ್ರಮಣ್ಯ ವಲಯ, ಶ್ರೀ  ಶಿವಾನಂದ ಶಿಂಪಿ ಸುಬ್ರಹ್ಮಣ್ಯ ವಲಯ ಉಪಸ್ಥಿತರಿದ್ದರು.

ಚಿತ್ರಕಲಾ ಸ್ಪರ್ಧೆಯಲ್ಲಿ ಸುಮಾರು 170 ವಿದ್ಯಾರ್ಥಿಗಳು ಭಾಗವಹಿಸಿದ್ದರು ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು. ಶ್ರೀ ಯೋಗೀಶ್ ಜಿ ಸಿ ಡಿ ವೈ ಆರ್ ಎಫ್ ಸುಬ್ರಮಣ್ಯ ವಲಯ ಇವರು ಸ್ವಾಗತಿಸಿ, ಶ್ರೀ ಅಜಿತ್ ಕುಮಾರ್ ಡಿ ವೈ ಆರ್ ಎಫ್ ಪಂಜ ವಲಯ ವಂದಿಸಿ, ಶ್ರೀ ಯಶೋಧರ ಡಿ ವೈ ಆರ್ ಎಪ್ ಪಂಜ ವಲಯ ಕಾರ್ಯಕ್ರಮ ನಿರೂಪಿಸಿದರು.

 

error: Content is protected !!

Join the Group

Join WhatsApp Group