ಮಂಗಳೂರಿನಿಂದ ಪೊಳಲಿ ಕೆಎಸ್ ಆರ್ ಟಿಸಿ ಬಸ್ ಸಂಚಾರಕ್ಕೆ ಚಾಲನೆ

(ನ್ಯೂಸ್ ಕಡಬ)newskadaba.com ಬಂಟ್ವಾಳ, ಅ. 05.  ಮಂಗಳೂರಿನಿಂದ ಪೊಳಲಿಯ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಕೆಎಸ್ ಆರ್ ಟಿಸಿ ಬಸ್ ಸಂಚಾರಕ್ಕೆ ಶುಕ್ರವಾರ ಚಾಲನೆ ನೀಡಲಾಗಿದೆ.

ಶ್ರೀ ಪೊಳಲಿ ಕ್ಷೇತ್ರದಿಂದ ಬೆಂಜನಪದವು, ಕಲ್ಪನೆ ,ಕಡೇಗೋಳಿ, ಫರಂಗಿಪೇಟೆ, ಪಡೀಲಿನ ಮೂಲಕ ಮಂಗಳೂರಿಗೆ ಈ ಸರಕಾರಿ ಬಸ್ ನ ವ್ಯವಸ್ಥೆಯು ಇರಲಿದೆ. ಹಲವು ವರ್ಷದಿಂದ ಈ ರೂಟಿನಲ್ಲಿ ಮಂಗಳೂರಿನಿಂದ ಪೊಳಲಿಗೆ ಸರಕಾರಿ ಬಸ್ ನ ವ್ಯವಸ್ಥೆ ಕಲ್ಪಿಸುವಂತೆ ಇಲ್ಲಿನ ನಾಗರಿಕರು‌ ಕೆಎಸ್ ಆರ್ ಟಿಸಿ ಹಾಗೂ ಜಿಲ್ಲಾಡಳಿತಕ್ಕೆ ಮನವಿ‌ ಸಲ್ಲಿಸಿತ್ತು.ಬ್ರಹ್ಮರಕೊಟ್ಲು ಯಕ್ಷಮಿತ್ರ ಸದಸ್ಯರು ಹಾಗೂ ಸ್ಥಳೀಯ ಮುಖಂಡರ ಮುತುವರ್ಜಿಯಿಂದ ನವರಾತ್ರಿಯ ಶುಭ ಸಂದರ್ಭದಲ್ಲಿಯೇ ಕೆಎಸ್ ಆರ್ ಟಿಸಿ‌ಬಸ್ ಬಸ್ ಆರಂಭಗೊಂಡಿದೆ.

Also Read  ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಊಟ ಸೇವನೆ..! ➤ 60 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

 

error: Content is protected !!
Scroll to Top