ರೈಲ್ವೆ ಹಳಿ ಮೇಲೆ ವ್ಯಕ್ತಿಯ ಮೃತದೇಹ ಪತ್ತೆ..!

(ನ್ಯೂಸ್ ಕಡಬ) newskadaba.com ಸಾಗರ, ಅ. 01. ತಾಲೂಕಿನ ಆನಂದಪುರ ಸಮೀಪದ ಅಂದಾಸುರ ರೈಲ್ವೆ ಗೇಟ್ ನ ರೈಲ್ವೆ ಹಳಿ ಮೇಲೆ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿರವುದು ವರದಿಯಾಗಿದೆ. ಮೃತರನ್ನು ಕೋಡೂರು ಮೂಲದ ಜೆಸಿಬಿ ಆಪರೇಟರ್ ಬಸವರಾಜ್ ಎಂದು ಗುರುತಿಸಲಾಗಿದೆ.


ರೈಲು ಬಡಿದು ಮೃತಪಟ್ಟಿದ್ದರೆ ದೇಹ ಜರ್ಜರಿತವಾಗಿರುತ್ತಿತ್ತು. ಆದರೆ ಮೇಲ್ನೋಟಕ್ಕೆ ಬಸವರಾಜ್ ತಲೆಗೆ ಮಾತ್ರ ಗಾಯಗೊಂಡಂತೆ ಕಾಣಿಸುತ್ತಿದ್ದು, ರೈಲು ಢಿಕ್ಕಿಯಾದ ಕುರುಹು ಗೋಚರಿಸುತ್ತಿಲ್ಲ. ಬೇರೆಲ್ಲೊ ಕೊಲೆ ಮಾಡಿ ಮೃತದೇಹ ಇಲ್ಲಿ ತಂದು ಹಾಕಿರುವ ಬಗ್ಗೆ ಸಾರ್ವಜನಿಕರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಸ್ಥಳಕ್ಕೆ ರೈಲ್ವೆ ಪೊಲೀಸರು ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

Also Read  ಭಾರತದ ಅಗ್ರಮಾನ್ಯ ಸಿಂಗಲ್ಸ್ ಆಟಗಾರ್ತಿ ಅಂಕಿತಾ ರೈನಾ ಲುವಾನ್‌ ಟೆನಿಸ್‌ಕ್ವಾರ್ಟರ್‌ ಫೈನಲ್ ಗೆ

 

error: Content is protected !!
Scroll to Top