(ನ್ಯೂಸ್ ಕಡಬ)newskadaba.com, ಮುಂಬೈ(ಅ.01): ಆಕಸ್ಮಿಕವಾಗಿ ಗುಂಡು ತಗುಲಿ ನಟ ಗೋವಿಂದ ಅವರ ಕಾಲಿಗೆ ಗಾಯವಾಗಿದ್ದು, ಅವರನ್ನು ಮಂಗಳವಾರ ಬೆಳಿಗ್ಗೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ನಟ ಗೋವಿಂದ ಅವರು ಆಸ್ಪತ್ರೆಗೆ ದಾಖಲಾಗಿರುವುದನ್ನು ಅವರ ಮ್ಯಾನೇಜರ್ ಶಶಿ ಸಿನ್ಹಾ ದೃಢಪಡಿಸಿದ್ದು, ಮುಂಜಾನೆ 4.45ರ ಸುಮಾರಿಗೆ ಗೋವಿಂದ ಅವರ ಪರವಾನಗಿ ಪಡೆದ ರಿವಾಲ್ವರ್ನಿಂದ ಆಕಸ್ಮಿಕವಾಗಿ ಗುಂಡು ತಗುಲಿ ಗಾಯವಾಗಿದೆ ಎಂದು ತಿಳಿಸಿದ್ದಾರೆ.
ಘಟನೆ ಬೆನ್ನಲ್ಲಿ ನಟ ಗೋವಿಂದ ಅವರು ಆಡಿಯೋ ಕ್ಲಿಪ್ ನ್ನು ಬಿಡುಗಡೆ ಮಾಡಿದ್ದು, ಅಭಿಮಾನಿಗಳು, ಪೋಷಕರು ಮತ್ತು ಗುರುಗಳ ಆಶೀರ್ವಾದ ನನ್ನನ್ನು ಉಳಿಸಿದೆ. ನನ್ನ ಕಾಲಿಗೆ ಆಕಸ್ಮಿಕವಾಗಿ ಬುಲೆಟ್ ತಗುಲಿದ್ದು, ಅದನ್ನು ಹೊರತೆಗೆಯಲಾಗಿದೆ. ವೈದ್ಯರಿಗೆ ಮತ್ತು ನಿಮ್ಮ ಪ್ರಾರ್ಥನೆಗಳಿಗೆ ನನ್ನ ಧನ್ಯವಾದಗಳು ಎಂದು ಹೇಳಿದ್ದಾರೆ.