(ನ್ಯೂಸ್ ಕಡಬ) newskadaba.com ಕಾರ್ಕಳ, ಸೆ.30. ಮೃತ ವ್ಯಕ್ತಿಯೊಬ್ಬರ ಹೆಸರಿನಲ್ಲಿದ್ದ ಕೋಟ್ಯಾಂತರ ರೂ. ಷೇರುಗಳನ್ನು ಮಾರಾಟ ಮಾಡಿ ಸ್ವಂತಕ್ಕೆ ಉಪಯೋಗಿಸಿಕೊಂಡು ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಸೆನ್ ಅಪರಾಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಅಶೋಕ್ ಜು.13ರಂದು ಮೃತಪಟ್ಟಿದ್ದರೂ ಮೃತರ ಅಣ್ಣ ಮೋಹನ್‌ರವರ ಮಗ ದಿನೇಶ್ ಎಂಬಾತನು 2020ರ ಜು.15ರಿಂದ ಆ.18ರ ಮಧ್ಯಾವಧಿ ಯಲ್ಲಿ ಮೃತ ಅಶೋಕ್ ಅವರಿಗೆ ಸೇರಿದ ವಿವಿಧ ಕಂಪೆನಿಗಳ ಸೇರಿದ ಒಟ್ಟು 4,24,90,548.90ರೂ. ಮೌಲ್ಯದ 14,970 ಪೇರುಗಳನ್ನು ಮೃತರ ಮೊಬೈಲ್ ಸಂಖ್ಯೆ ಮತ್ತು ಈ-ಮೇಲ್ ಐ.ಡಿ ದುರ್ಬಳಕೆ ಮಾಡಿಕೊಂಡು ಮಾರಾಟ ಮಾಡಿರುವುದಾಗಿ ದೂರು ದಾಖಲಾಗಿದೆ.