(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.10. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಓಲಾ ಕ್ಯಾಬ್ ವಿರುದ್ಧ ನಡೆಯುತ್ತಿರುವ ಮುಷ್ಕರ ತೀವ್ರಗೊಂಡಿದ್ದು, ಹೋರಾಟಗಾರರನ್ನು ಬಂಧಿಸಿ ಠಾಣೆಗೆ ಕರೆದೊಯ್ದ ಘಟನೆ ಶನಿವಾರದಂದು ನಡೆದಿದೆ.
ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಮಂಗಳೂರಿನಲ್ಲಿ ಓಲಾ ವಿರುದ್ದ ಚಾಲಕರ ಮುಷ್ಕರ ಐದನೇ ದಿನಕ್ಕೆ ಕಾಲಿಟ್ಟಿದ್ದು, ಓಲಾ ವಿರುದ್ದ ಹೋರಾಟವನ್ನು ತೀವ್ರಗೊಳಿಸಿದ್ದಾರೆ. ಮಂಗಳೂರಿನ ಲಾಲ್ ಭಾಗ್ ನಲ್ಲಿರುವ ಓಲಾ ಕಂಪೆನಿ ಕಚೇರಿಗೆ ಬೀಗ ಹಾಕಿದ ಓಲಾ ಕಂಪೆನಿ ಸಿಬ್ಬಂದಿಗಳು ಓಲಾ ಕಂಪೆನಿಯ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಆಗ್ರಹಿಸಿ ರಸ್ತೆ ತಡೆ ನಡೆಸಲು ಮುಂದಾಗಿ ಬೀದಿಗಿಳಿದಿದ್ದರಿಂದ ಹೋರಾಟಗಾರರನ್ನು ಬಂಧಿಸಲಾಗಿದೆ. ಸ್ಥಳದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಮುಂದುವರೆದಿದೆ.