‘ಅನ್ನ’ ತಿನ್ನೋದ್ರಿಂದ ಸಣ್ಣಗಾಗುತ್ತಾ?? – ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

(ನ್ಯೂಸ್ ಕಡಬ) newskadaba.com ಸೆ. 28. ಯಾವುದೇ ಮನುಷ್ಯ ಅಂದ್ರೆ ಪುರುಷರಾಗಲಿ ಅಥವಾ ಮಹಿಳೆಯರಾಗಲಿ ಅವರೆಲ್ಲರಿಗೂ ಕೂಡ ತಾವು ಸುಂದರವಾಗಿರಬೇಕು, ಸ್ಮಾರ್ಟ್ ಆಗಿ ಕಾಣಬೇಕು ಅದರಲ್ಲೂ ಪ್ರಮುಖವಾಗಿ ಆರೋಗ್ಯವಂತರಾಗಿ ಸುದೃಢರಾಗಿದಬೇಕು ಎಂಬ ಆಸೆ ಇದ್ದೇ ಇರುತ್ತದೆ. ಆದರೆ ಅವರಿರುವ ಎತ್ತರ, ಬೆಳೆದ ಬೊಜ್ಜು, ದಡೂತಿ ದೇಹ ಇದೆಲ್ಲವೂ ಅಡ್ಡಿ ಬರುತ್ತದೆ. ಹೀಗಾಗಿ ಸಣ್ಣಗಾಗಲು ಅನೇಕರು ಹಲವು ವಿಧಧ ಪ್ರಯೋಗಗಳನ್ನು ಮಾಡುತ್ತಾರೆ. ಜಿಮ್ ಟ್ರೈನರ್ ಗಳ ಮಾರ್ಗದರ್ಶನದಂತೆ ಅನ್ನು ತಿನ್ನುವುದನ್ನು ಕೂಡಾ ಬಿಡುವುದನ್ನು ಹೆಚ್ಚಿನವರು ರೂಢಿಸಿಕೊಂಡಿದ್ದಾರೆ.


ವಾಸ್ತವದ ಪ್ರಕಾರ ಅನ್ನದಲ್ಲಿ ಹೆಚ್ಚಿನ ಕ್ಯಾಲೋರಿ ಇರೋದು ಹೌದು. ಹೀಗಾಗಿ ಅದು ನಮ್ಮಬೊಜ್ಜು, ಫ್ಯಾಟ್ ಅನ್ನು ಹೆಚ್ಚಿಸುತ್ತೆ. ಇದನ್ನು ತಿನ್ನೋದನ್ನು ಬಿಟ್ಟರೆ ನಾವು ಬೇಗ ಸಣ್ಣಗಾಗಬಹುದು ಎಂದು ಅನೇಕ ಜಿಮ್ ಟ್ರೈನರ್ ಗಳು, ಆರೋಗ್ಯ ಸಲಹೆಗಾರರು, ಡಯಟ್ ಟ್ರೈನಿಗಳು ಹೇಳೋದನ್ನು ಕೇಳಿದ್ದೇವೆ. ಇದನ್ನು ನಂಬಿ ಅನೇಕರು ಅನ್ನವನ್ನು ತಿನ್ನೋದೇ ಇಲ್ಲ. ಹಾಗಿದ್ರೆ ಇದು ನಿಜಾನಾ? ಒಂದು ವೇಳೆ ಒಂದು ತಿಂಗಳು ಅನ್ನ ತಿನ್ನೋದು ಬಿಟ್ಟರೆ ಏನಾಗುತ್ತದೆ? ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲದೆ ನೋಡಿ ಉತ್ತರ. ಮಾನವನ ದೇಹದಲ್ಲಿ ತೂಕ ಹೆಚ್ಚಳಕ್ಕೆ ಕ್ಯಾಲೋರಿಯೇ ಪ್ರಮುಖ ಕಾರಣವಾಗಿದ್ದು, 100 ಗ್ರಾಂ ಅಕ್ಕಿಯಲ್ಲಿ 130 ಕ್ಯಾಲರಿ ಇರುತ್ತದೆ. ಒಂದು ತಿಂಗಳ ಕಾಲ ಅನ್ನವನ್ನು ತಿನ್ನದಿದ್ದರೆ ದೇಹದಲ್ಲಿ ಕ್ಯಾಲೋರಿಗಳ ಪ್ರಮಾಣವು ಕಡಿಮೆಯಾಗುತ್ತದೆ. ಇದು ಮುಖ್ಯವಾಗಿ ತೂಕ ನಷ್ಟಕ್ಕೆ ಕಾರಣವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.

Also Read  ಇಂದು(ಮಾರ್ಚ್ 20) ವಿಶ್ವ ಬಾಯಿ ಆರೋಗ್ಯ ದಿನ ► ಡಾ| ಮುರಲೀ ಮೋಹನ್ ಚೂಂತಾರು ರವರ ವಿಶೇಷ ಲೇಖನ

ಡಯಟ್ ಗೋಸ್ಕರ ಅನ್ನ ತಿನ್ನದಿದ್ದರೆ ನಮ್ಮ ದೇಹದಲ್ಲಿನ ನಾರಿನಂಶವೂ ಕಡಿಮೆಯಾಗುತ್ತದೆ. ಇದು ನಮ್ಮ ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಬದಲಾಯಿಸುತ್ತದೆ. ಮತ್ತೊಂದೆಡೆ ಪೋಷಕಾಂಶಗಳ ವಿಷಯದಲ್ಲಿ ಅಕ್ಕಿಯಲ್ಲಿ ಕಾರ್ಬೋಹೈಡ್ರೇಟ್‌ ಗಳು ಹೆಚ್ಚು. ಇದಲ್ಲದೆ, ಇದು ಬಿ ಜೀವಸತ್ವಗಳು ಮತ್ತು ಖನಿಜಗಳನ್ನು ಸಹ ಒಳಗೊಂಡಿದೆ. ಅದಕ್ಕಾಗಿಯೇ ಅದರ ಪರಿಣಾಮವು ಪ್ರತಿ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ. ಹಾಗಾಗಿ ಒಂದು ತಿಂಗಳು ಅನ್ನ ತಿನ್ನದೇ ಇದ್ದರೆ ನಮ್ಮ ಆರೋಗ್ಯ ಸುಧಾರಿಸುತ್ತದೆ ಎಂಬುದು ಸುಳ್ಳು.

error: Content is protected !!
Scroll to Top