ಎಸ್ಸೆಸ್ಸೆಫ್ ಪುತ್ತೂರು ಡಿವಿಷನ್ ಸಾಹಿತ್ಯೋತ್ಸವ: ಸ್ವಾಗತ ಸಮಿತಿ ರಚನೆ

(ನ್ಯೂಸ್ ಕಡಬ) newskadaba.com ಪುತ್ತೂರು ಸೆ.27:  ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ ವರ್ಷಕ್ಕೊಮ್ಮೆ ಆಯೋಜಿಸುವ ಸಾಂಸ್ಕೃತಿಕ, ಪ್ರತಿಭಾ ಸ್ಪರ್ಧಾ ಕಾರ್ಯಕ್ರಮ “ಸಾಹಿತ್ಯೋತ್ಸವ”ದ ಸ್ವಾಗತ ಸಮಿತಿಯನ್ನು ಎಸ್ಸೆಸ್ಸೆಫ್ ಪುತ್ತೂರು ಡಿವಿಷನ್ ಅಧ್ಯಕ್ಷರಾದ ಸಯ್ಯಿದ್ ಸಾಬಿತ್ ಮುಈನಿ ಅಸ್ಸಖಾಫಿ ತಂಙಳ್‌ ರವರ ನೇತೃತ್ವದಲ್ಲಿ ಪುತ್ತೂರು ಪಡೀಲಿನಲ್ಲಿರುವ ಸುನ್ನೀ ಸೆಂಟರ್‌ನಲ್ಲಿ ರಚಿಸಲಾಯಿತು.


ಸಾಹಿತ್ಯೋತ್ಸವ ಕಾರ್ಯಕ್ರಮವು ನವೆಂಬರ್ 3ರ ಆದಿತ್ಯವಾರದಂದು ಪಾಟ್ರಕೋಡಿಯಲ್ಲಿ ನಡೆಸಲು ತೀರ್ಮಾನಿಸಲಾಯಿತು. ಸ್ವಾಗತ ಸಮಿತಿ ಚೇರ್ಮನ್ ಆಗಿ ಸಲಾಂ ಹನೀಫಿ ಕಬಕ, ಜನರಲ್ ಕನ್ವೀನರ್ ಆಗಿ ಉವೈಸ್ ಬೀಟಿಗೆ, ಕೋಶಾಧಿಕಾರಿಯಾಗಿ ಕೆ.ಪಿ ಖಲಂದರ್ ‌ಶಾಫಿ ಪಾಟ್ರಕೋಡಿ ಆಯ್ಕೆಯಾದರು.

Also Read  ಬೆಳ್ತಂಗಡಿ :ನಾಪತ್ತೆಯಾಗಿದ್ದ ಯುವಕ ಕೆರೆಯಲ್ಲಿ ಶವವಾಗಿ ಪತ್ತೆ

error: Content is protected !!
Scroll to Top