ಸೆ.28ರಿಂದ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟ

(ನ್ಯೂಸ್ ಕಡಬ) newskadaba.com ಸೆ. 27. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದೊಂದಿಗೆ 2024-25ನೇ ಸಾಲಿನ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟದ ಒಟ್ಟು 25 ಕ್ರೀಡಾ ಸ್ಪರ್ಧೆಗಳನ್ನು ಸೆಪ್ಟೆಂಬರ್ 28 ಮತ್ತು 29ರಂದು ದಕ್ಷಿಣ ಕನ್ನಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಆಯೋಜಿಸಲಾಗುತ್ತಿದೆ.

ಸೆಪ್ಟೆಂಬರ್ 28ರಂದು ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಕುಸ್ತಿ, ಥ್ರೋಬಾಲ್, ಬಾಲ್ ಬ್ಯಾಡ್ಮಿಂಟನ್,  ಬಾಕ್ಸಿಂಗ್ (ಆಯ್ಕೆ), ವುಷು (ಆಯ್ಕೆ), ವೇಟ್‍ ಲಿಫ್ಟಿಂಗ್ (ಆಯ್ಕೆ), ಟೇಕ್ವೊಂಡೊ (ಆಯ್ಕೆ) ಸ್ಫರ್ಧೆ – ಮಂಗಳಾ ಕ್ರೀಡಾಂಗಣ ಮಂಗಳೂರು.
ಫುಟ್‍ಬಾಲ್, ಹ್ಯಾಂಡ್‍ಬಾಲ್, ಡಾ|| ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣ, ಚಾಮರಾಜನಗರ ಜಿಲ್ಲೆ. ಆರ್ಚರಿ (ಆಯ್ಕೆ), ಫೆನ್ಸಿಂಗ್ (ಆಯ್ಕೆ) ಶ್ರೀ ಕಂಠೀರವ ಕ್ರೀಡಾಂಗಣ, ಬೆಂಗಳೂರು ನಗರ. ಹಾಕಿ, ಯೋಗ, ಜಿಮ್ನಾಸ್ಟಿಕ್ಸ್ (ಆಯ್ಕೆ) ಕ್ರೀಡಾ ಶಾಲೆ, ಕೂಡಿಗೆ.
ವಾಲಿಬಾಲ್, ಕಬಡ್ಡಿ – ಜಿಲ್ಲಾ ಕ್ರೀಡಾಂಗಣ, ಉಡುಪಿಯಲ್ಲಿ ನಡೆಯಲಿದೆ.

ಸೆಪ್ಟೆಂಬರ್ 29ರಂದು ಬಾಸ್ಕೆಟ್‍ಬಾಲ್ – ಮಂಗಳಾ ಕ್ರೀಡಾಂಗಣ, ಮಂಗಳೂರು.
ಟೇಬಲ್ ಟೆನ್ನಿಸ್, ಈಜು, ಟೆನ್ನಿಸ್ ಜಿಲ್ಲಾ ಕ್ರೀಡಾಂಗಣ, ಉಡುಪಿ.
ಖೋ-ಖೋ, ನೆಟ್‍ಬಾಲ್ -ಜಿಲ್ಲಾ ಕ್ರೀಡಾಂಗಣ, ಹಾಸನ.
ಜೂಡೋ (ಆಯ್ಕೆ) – ಜಿಲ್ಲಾ ಕ್ರೀಡಾಂಗಣ, ಚಿಕ್ಕಮಗಳೂರಿನಲ್ಲಿ ನಡೆಯಲಿದೆ.

ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಸ್ಪರ್ಧೆ ನಡೆಯುವ ದಿನಗಳಂದು ಬೆಳಿಗ್ಗೆ 8 ಗಂಟೆಯೊಳಗಾಗಿ ಸ್ಪರ್ಧೆ ನಡೆಯುವ ಸ್ಥಳಗಳಲ್ಲಿ ಹಾಜರಿರಬೇಕು. ಈಗಾಗಲೇ ಮೈಸೂರು ವಿಭಾಗದ ಜಿಲ್ಲೆಗಳಲ್ಲಿ ಆಯೋಜಿಸಲಾಗಿರುವ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ವೈಯಕ್ತಿಕ ವಿಭಾಗದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಕ್ರೀಡಾಪಟುಗಳು ಹಾಗೂ ಗುಂಪು ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ತಂಡ ಮೈಸೂರು ವಿಭಾಗ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಬಹುದು. ಉಳಿದಂತೆ ಆಯ್ಕೆ ಕ್ರೀಡೆಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ನೇರವಾಗಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ ಇವರನ್ನು ದೂರವಾಣಿ ಸಂಖ್ಯೆ 0824-2451264 ರಲ್ಲಿ ಸಂಪರ್ಕಿಸುವಂತೆ  ಪ್ರಕಟಣೆ ತಿಳಿಸಿದೆ.

error: Content is protected !!

Join the Group

Join WhatsApp Group