ನೆಟ್ ಫ್ಲಿಕ್ಸ್ ನಿಂದ 47 ಕೋಟಿ ವಂಚನೆ ಆರೋಪ-ದೂರು

(ನ್ಯೂಸ್ ಕಡಬ) newskadaba.com ಸೆ. 26. ಬಾಲಿವುಡ್‌ ನಿರ್ಮಾಪಕ ವಶು ಭಗ್ನಾನಿ ಅವರು ನೆಟ್ ಫ್ಲಿಕ್ಸ್ ಇಂಡಿಯಾ ಸಂಸ್ಥೆ ಚಿತ್ರದ ಹಕ್ಕುಗಳಿಗಾಗಿ 47.37 ಕೋಟಿಗಳಷ್ಟು ವಂಚಿಸಿದ್ದಾರೆ ಎಂದು ಆರೋಪಿಸಿ ಪೊಲೀಸ್‌‍ ದೂರು ದಾಖಲಿಸಿರುವ ಕುರಿತು ವರದಿಯಾಗಿದ್ದು, ಆದರೆ ಈ ಆರೋಪವನ್ನು ಸಂಸ್ಥೆ ನಿರಾಕರಿಸಿರುವುದಾಗಿ ತಿಳಿದುಬಂದಿದೆ. ಮುಂಬೈ ಪೊಲೀಸ್‌‍ನ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲ್ಯು) ಭಗ್ನಾನಿ ಅವರು ಸಲ್ಲಿಸಿದ ದೂರಿನ ತನಿಖೆಯನ್ನು ಪ್ರಾರಂಭಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವರದಿಯ ಪ್ರಕಾರ, ನಿರ್ಮಾಪಕರು ತಮ್ಮ ಇತ್ತೀಚಿನ ಮೂರು ಹಿಂದಿ ಚಲನಚಿತ್ರಗಳಾದ ಹೀರೋ ನಂ 1, ಮಿಷನ್‌ ರಾಣಿಗಂಜ್‌‍ ಮತ್ತು ಬಡೆ ಮಿಯಾನ್‌ ಚೋಟೆ ಮಿಯಾನ್‌‍ ಹಕ್ಕುಗಳ ಬಗ್ಗೆ ನೆಟ್‌ಫ್ಲಿಕ್ಸ್‌‍ ತನಗೆ ಮೋಸ ಮಾಡಿದೆ ಎಂದು ಹೇಳಿದ್ದಾರೆ. ಸ್ಟ್ರೀಮಿಂಗ್‌ ಪ್ಲಾಟ್‌ಫಾರ್ಮ್‌ನಿಂದ ಈ ಚಲನಚಿತ್ರಗಳಿಗೆ ಪಾವತಿಸಬೇಕಾದ 47.37 ಕೋಟಿ ಪಾವತಿಗಳನ್ನು ಭಗ್ನಾನಿ ಸ್ವೀಕರಿಸಲಿಲ್ಲ ಎಂದು ಅವರು ದೂರನ್ನು ಉಲ್ಲೇಖಿಸಿ ಹೇಳಿರುವುದಾಗಿ ತಿಳಿದುಬಂದಿದೆ.

error: Content is protected !!

Join the Group

Join WhatsApp Group