ಚಾಲಕನ ನಿಯಂತ್ರಣ ತಪ್ಪಿ ಅನಿಲ ಟ್ಯಾಂಕರ್ ಪಲ್ಟಿ

(ನ್ಯೂಸ್ ಕಡಬ) newskadaba.com ಕಾಸರಗೋಡು, ಸೆ. 25. ಅನಿಲ ಸಾಗಾಟದ ಟ್ಯಾಂಕರ್ ಲಾರಿ ರಸ್ತೆಗೆ ಮಗುಚಿ ಬಿದ್ದ ಘಟನೆ ಎಡನೀರು ಎಂಬಲ್ಲಿ ಇಂದು ಮಧ್ಯಾಹ್ನ ನಡೆದಿದೆ.

ಮಂಗಳೂರಿನಿಂದ ಕೊಚ್ಚಿಗೆ ತೆರಳುತ್ತಿದ್ದ ಟ್ಯಾಂಕರ್ ಎಡನೀರು ಕೋರಿಕ್ಕಾರ್ ಮೂಲೆ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಕಾಸರಗೋಡು ಅಗ್ನಿ ಶಾಮಕ ದಳದ ಸಿಬ್ಬಂದಿಗಳು, ವಿದ್ಯಾನಗರ ಠಾಣಾ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಮಂಗಳೂರಿನಿಂದ ಕಂಪೆನಿ ಅಧಿಕಾರಿಗಳು ಬಂದ ಬಳಿಕ ಟ್ಯಾಂಕರ್ ನ್ನು ತೆರವುಗೊಳಿಸುವ ಅಥವಾ ಅನಿಲವನ್ನು ಇನ್ನೊಂದು ಟ್ಯಾಂಕರ್ ಗೆ ವರ್ಗಾಯಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Also Read  ಬಹುಗ್ರಾಮ ಕುಡಿಯುವ ನೀರಿನಯಾನೆ ಮನವಿಗೆ ಸರಕಾರದ ಸ್ಪಂದನೆ ➤ ಸೂಕ್ತ ಕ್ರಮಕ್ಕೆ ಗ್ರಾಮೀಣಾಬಿವೃದ್ಧಿ ಪಂಚಾಯತ್ ರಾಜ್ ಇಲಾಖೆಗೆ ಪತ್ರ

 

error: Content is protected !!
Scroll to Top