ಉದ್ಘಾಟನೆಗೊಂಡ 24 ಗಂಟೆಗಳೊಳಗೆ ಇಂದಿರಾ ಕ್ಯಾಂಟೀನ್ ಹಾನಿಗೊಳಿಸಿದ ದುಷ್ಕರ್ಮಿಗಳು

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.08. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ‘ಇಂದಿರಾ ಕ್ಯಾಂಟೀನ್’ ಉದ್ಘಾಟನೆಗೊಂಡು 24 ಗಂಟೆಗಳೊಳಗೆ ದುಷ್ಕರ್ಮಿಗಳು ಹಾನಿಗೈದ ಘಟನೆ ಮಂಗಳೂರಿನಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ನಗರದ ಪುರಭವನದ ಸಮೀಪ ಮಂಗಳವಾರ ಉದ್ಘಾಟನೆಗೊಂಡಿದ್ದ ಇಂದಿರಾ ಕ್ಯಾಂಟೀನ್‌ಗೆ ರಾತ್ರಿ ದುಷ್ಕರ್ಮಿಗಳು ಹಾನಿಗೈದಿದ್ದು, ಕ್ಯಾಂಟೀನ್‌ನ ಕೈತೊಳೆಯುವ ನೀರಿನ ನಳ್ಳಿ ಹಾಗೂ ಶೌಚಾಲಯದ ಬಾಗಿಲಿಗೆ ಹಾನಿ ಉಂಟು ಮಾಡಿರುವುದು ಬುಧವಾರ ಮುಂಜಾನೆ ಬೆಳಕಿಗೆ ಬಂದಿದೆ. ತಕ್ಷಣವೇ ಸಂಬಂಧಪಟ್ಟವರು ಪೊಲೀಸರಿಗೆ ದೂರು ನೀಡಿದ್ದಾರೆ. ಉದ್ಘಾಟನೆಗೊಂಡು 24 ಗಂಟೆಗಳೊಳಗೆ ದುಷ್ಕರ್ಮಿಗಳು ತಮ್ಮ ದುಷ್ಕೃತ್ಯವನ್ನೆಸಗಿದ್ದಾರೆ.

Also Read  ಬೆಳ್ತಂಗಡಿ:ಯುವಕರಿಬ್ಬರ ಮೇಲೆ ಹಲ್ಲೆ

error: Content is protected !!
Scroll to Top