ವೈದ್ಯರ ಚೀಟಿ ಇಲ್ಲದೇ ಮೆಡಿಸಿನ್ ಕೊಡುವ ಮೆಡಿಕಲ್ ಸ್ಟೋರ್ ವಿರುದ್ದ ಕಠಿಣ ಕ್ರಮ- ಸಚಿವ ಗುಂಡೂರಾವ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 21. ರಾಜ್ಯದಲ್ಲಿ ಮಾದಕ ವಸ್ತುಗಳ ಹಾವಳಿಯನ್ನು ಬೇರು ಸಮೇತ ಕಿತ್ತೆಗೆಯಲು ರಾಜ್ಯ ಸರಕಾರ ಪಣತೊಟ್ಟಿದ್ದು, ಹೀಗಾಗಿ ಇನ್ನುಮುಂದೆ ರಾಜ್ಯದಲ್ಲಿ ವೈದ್ಯರ ಚೀಟಿ ಇಲ್ಲದೇ ಮಾತ್ರೆ ಕೊಡುವ ‘ಮೆಡಿಕಲ್ ಸ್ಟೋರ್’ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದ್ದಾರೆ.

ಮೆಡಿಕಲ್ ಸ್ಟೋರ್ ಗಳಲ್ಲಿ ವೈದ್ಯರ ಚೀಟಿ ಇಲ್ಲದೇ ಮಾತ್ರೆಗಳನ್ನು ಕೊಡುತ್ತಿದ್ದಾರೆ. ಸಿಂಥೆಟಿಕ್ ಡ್ರಗ್ಸ್ ಸಿಗುತ್ತಿದೆ ಎಂಬ ಮಾಹಿತಿ ಲಭಿಸಿದ ಮೇರೆಗೆ ಅಂಗಡಿಗಳ ಮೇಲೆ ದಿಢೀರ್ ದಾಳಿ ನಡೆಸಿ, ಪರಿಶೀಲನೆ ನಡೆಸಲಾಗಿದೆ. ನಿಯಮ ಉಲ್ಲಂಘಿಸಿರುವ ಅಂಗಡಿಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಮಾಜಕ್ಕೆ ದೊಡ್ಡ ಪಿಡುಗಾಗಿರುವ ಮಾದಕ ವಸ್ತುಗಳ ನಿರ್ಮೂಲನೆಗೆ ದಿನ ಹೆಜ್ಜೆಯಿಟ್ಟಿರುವ ನಮ್ಮ ಸರ್ಕಾರಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯ. ನಮ್ಮ ಪ್ರಯತ್ನಕ್ಕೆ ನೀವು ಕೈಜೋಡಿಸಿ, ಒಗ್ಗಟ್ಟಾಗಿ ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಿಸೋಣ ಎಂದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

error: Content is protected !!

Join WhatsApp Group

WhatsApp Share