ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯ ಅಮಾನತು ಆದೇಶ ಹಿಂಪಡೆದ ಸರ್ಕಾರ

(ನ್ಯೂಸ್ ಕಡಬ) newskadaba.com ಕಾರ್ಕಳ, ಸೆ. 19.  ಕುಕ್ಕುಂದೂರು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಪ್ರಭಾವತಿಯವರ ಅಮಾನತು ಆದೇಶವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಿಂದಕ್ಕೆ ಪಡೆದಿದೆ‌. ಕುಕ್ಕುಂದೂರು ಗ್ರಾ.ಪಂ. ಅನುದಾನದಿಂದ ನಿರ್ಮಿಸಲಾಗಿರುವ ಹೆಚ್ಚುವರಿ ಕೊಠಡಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಸಕ ಸುನಿಲ್ ಕುಮಾರ್ ಅವರನ್ನು ಆಹ್ವಾನ ಮಾಡಲಿಲ್ಲ.

ಇದರ ಬಗ್ಗೆ ಮಾಹಿತಿ ಕಲೆ ಹಾಕಿ ಸೆಪ್ಟೆಂಬರ್ 4ರಂದು ಇಲಾಖೆ ಅಮಾನತು ಮಾಡಿತ್ತು. ಅಮಾನತು ಆದೇಶ ಬಳಿಕ ಪುನಃ ಈ ಬಗ್ಗೆ ಪರಿಶೀಲನೆ ಮಾಡಿದ ಬಳಿಕ ಇಂದು ಅವರನ್ನು ಮರಳಿ ಗೌರವ ಧನ ಸೇವೆಗೆ ತೆರಳಲು ಇಲಾಖೆ ಆದೇಶ ನೀಡಿದೆ.

Also Read  ಪ್ರಧಾನಿ ನರೇಂದ್ರ ಮೋದಿಯ ಮನೆ ಮೇಲೆಯೂ ರೈಡ್ ಆಗಲಿ ➤ ಡಿ.ವಿ. ಸದಾನಂದ ಗೌಡರ ಹಳೆಯ ವೀಡಿಯೋ ವೈರಲ್

 

error: Content is protected !!
Scroll to Top