ಪೆಂಗ್ವಿನ್, ಆನಕೊಂಡ ತರಿಸುವ ನಿರ್ಧಾರಕ್ಕೆ ಮುಂದಾದ ಪಿಲಿಕುಳ ಉದ್ಯಾನವನ

pilikula

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 18. ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಮುಂಬಯಿಯ ಬೈಕುಲಾ ಮೃಗಾಲಯದಿಂದ ದಕ್ಷಿಣ ಅಮೇರಿಕಾ ಮೂಲದ ಪೆಂಗ್ವಿನ್ ತರಿಸುವ ಮಹತ್ವದ ನಿರ್ಧಾರವೊಂದನ್ನು ಪ್ರಾಣಿಗಳ ವಿನಿಮಯ ಯೋಜನೆಯಡಿ ಕೈಗೊಳ್ಳಲಾಗಿದೆ. ಇದಕ್ಕೆ ಬದಲಾಗಿ ಪಿಲಿಕುಳದಿಂದ ಮಾರ್ಶ್ ಮೊಸಳೆಯನ್ನು ಬೈಕುಲಾಕ್ಕೆ ನೀಡಲಾಗುತ್ತದೆ.

ಪೆಂಗ್ವಿನ್ ಗಳು ಸಾಮಾನ್ಯವಾಗಿ ಹಿಮಚ್ಚಾದಿತ ವಾತಾವರಣವಿರುವ ವಿಶೇಷವಾಗಿ ಅಂಟಾರ್ಟಿಕಾದಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಇದು ನೀರು ಮತ್ತು ಭೂಮಿ ಎರಡರಲ್ಲೂ ವಾಸಿಸುತ್ತವೆ. ಹೀಗಾಗಿ ಪೆಂಗ್ವಿನ್ ಗಳಿಗೆ ವಾಸಿಸಲು ಪೂರಕವಾದ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ದಾನಿಗಳು ಅಥವಾ ಸಿಎಸ್ಆರ್ ನೆರವಿನಿಂದ ತಜ್ಞರ  ಸಲಹೆ ಪಡೆದು ಕ್ರಮ ಕೈಗೊಳ್ಳಲಾಗುವುದು, ಇದರಿಂದ ಮೃಗಾಲಯ ವೀಕ್ಷಣೆಗೆ ಆಗಮಿಸುವ ವೀಕ್ಷಕರ, ಪ್ರವಾಸಿಗರ ಸಂಖ್ಯೆಯೂ ಹೆಚ್ಚಳವಾಗಲಿದೆ ಎಂದು ಜೈವಿಕ ಉದ್ಯಾನವನದ ನಿರ್ದೇಶಕ ತಿಳಿಸಿದ್ದಾರೆ. ಅದೇರೀತಿ ಚೆನ್ನೈನ ಕ್ರೊಕೊಡೈಲ್ ಬ್ಯಾಂಕ್ ನಿಂದ ಹಳದಿ ಆನಕೊಂಡ ಉರಗಗಳನ್ನು ತರಿಸಲಾಗುತ್ತಿದ್ದು, ಇದಕ್ಕೆ ಬದಲಾಗಿ ಸರ್ಪ ಮತ್ತು ವಿಷಕಾರಿ ಹಾವುಗಳನ್ನು ಪಿಲಿಕುಳದಿಂದ ಅಲ್ಲಿಗೆ ನೀಡಲಾಗುತ್ತದೆ.

Also Read  ತಣ್ಣೀರುಬಾವಿ ಲಾಠಿ ಚಾರ್ಜ್ ಪ್ರಕರಣ..!!! ➤ ಪೊಲೀಸ್ ಕಾನ್ ಸ್ಟೇಬಲ್ ಅಮಾನತು

 

error: Content is protected !!
Scroll to Top