ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ NPS ವಾತ್ಸಲ್ಯ ಯೋಜನೆ ಇಂದಿನಿಂದ ಆರಂಭ

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 18.  ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯ NPS ವಾತ್ಸಲ್ಯ ಯೋಜನೆ ಇಂದಿನಿಂದ ಆರಂಭವಾಗುತ್ತಿದೆ. 18 ವರ್ಷದೊಳಗಿನ ವಯಸ್ಸಿನ ಮಕ್ಕಳ ಹೆಸರಿನಲ್ಲಿ ಪೋಷಕರು ಈ ಯೋಜನೆಯಡಿ ಅಕೌಂಟ್ ತೆರೆಯಬಹುದು. ವರ್ಷಕ್ಕೆ ಕನಿಷ್ಠ 1,000 ರೂ. ಹೂಡಿಕೆ ಅಗತ್ಯವಾಗಿದೆ.

ಇತ್ತೀಚಿನ ಬಜೆಟ್​ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು NPS ವಾತ್ಸಲ್ಯ ಯೋಜನೆ ಆರಂಭಿಸುವುದಾಗಿ ಘೋಷಿಸಿದ್ದರು. ಅದು ಇವತ್ತಿನಿಂದ ಜಾರಿಗೆ ಬರುತ್ತಿದೆ. ಮಕ್ಕಳ ಹೆಸರಿನಲ್ಲಿ ತೆರೆಯಬಹುದಾದ ಈ ಯೋಜನೆಯಿಂದ ನಾನಾ ರೀತಿಯ ಪ್ರಯೋಜನಗಳನ್ನು ಪಡೆಯಲು ಅವಕಾಶ ಇದೆ. ಭಾರತದ ಯಾವುದೇ ನಾಗರಿಕರು ತಮ್ಮ ಮಕ್ಕಳ ಹೆಸರಿನಲ್ಲಿ ಸ್ಕೀಮ್ ಅಕೌಂಟ್ ತೆರೆಯಬಹುದು. ಆ ಮಗು 18 ವರ್ಷ ವಯಸ್ಸಾಗುವವರೆಗೂ ಯೋಜನೆ ಚಾಲನೆಯಲ್ಲಿರುತ್ತದೆ. ವಯಸ್ಕ ಮಟಕ್ಕೆ ಬಂದ ಬಳಿಕ ಅಕೌಂಟ್ ಅನ್ನು ಮುಂದುವರಿಸಬಹುದು ಅಥವಾ ಅಂತ್ಯಗೊಳಿಸಬಹುದು.

Also Read  ಹಣದೋಚಿ ಪರಾರಿಯಾಗಿದ್ದ ಆರೋಪಿಗೆ ನ್ಯಾಯಾಂಗ ಬಂಧನ

 

error: Content is protected !!
Scroll to Top