ಗಣೇಶನಿಗೆ ಅದ್ದೂರಿ ವಿದಾಯ- ನಗರಾದ್ಯಂತ 37,000 ಕ್ಕೂ ಹೆಚ್ಚು ಮೂರ್ತಿಗಳ ವಿಸರ್ಜನೆ

(ನ್ಯೂಸ್ ಕಡಬ) newskadaba.com ಮುಂಬೈ, ಸೆ. 18.  ವಾಣಿಜ್ಯ ನಗರಿ ಮುಂಬೈ ಜನತೆ ಈ ಬಾರಿ ತಮ್ಮ ನೆಚ್ಚಿನ ಗಣೇಶನಿಗೆ ಅದ್ದೂರಿ ವಿದಾಯ ಹೇಳಿದ್ದು, ಇಂದು ಬೆಳಿಗ್ಗೆ ನಗರಾದ್ಯಂತ 37,000 ಕ್ಕೂ ಹೆಚ್ಚು ಗಣೇಶ ಮತ್ತು ಗೌರಿ ಮೂರ್ತಿಗಳನ್ನು ವಿಸರ್ಜನೆ ಮಾಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಣೇಶ ಹಬ್ಬದ ಕೊನೆಯ ದಿನವಾದ ಮಂಗಳವಾರ ಬೆಳಗ್ಗೆ ಆರಂಭವಾದ ವಿಸರ್ಜನೆ ಮೆರವಣಿಗೆಗಳು ರಾತ್ರಿಯಿಡೀ ಸುಗಮವಾಗಿ ನಡೆದಿದ್ದು, ನಗರದ ಕಡಲತೀರಗಳು, ಕೆರೆಗಳು ಮತ್ತು ಕೃತಕ ಕೊಳಗಳಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ನಡೆಯಿತು. ಪ್ರತಿ ವರ್ಷದಂತೆ ಲಕ್ಷಾಂತರ ಭಕ್ತರನ್ನು ಸೆಳೆಯುತ್ತಿದ್ದ ಲಾಲ್‌ಬಾಗ್ ಚಾ ರಾಜ ಗಣೇಶನ ಮೂರ್ತಿಯನ್ನು ದಕ್ಷಿಣ ಮುಂಬೈನ ಗಿರ್‌ಗಾಂವ್ ಬೀಚ್‌ನಲ್ಲಿ ಬೆಳಿಗ್ಗೆ 10.30 ರ ಸುಮಾರಿಗೆ ಅರಬ್ಬಿ ಸಮುದ್ರದಲ್ಲಿ ಮುಳುಗಿಸಲಾಯಿತು. ದೇವರ ದರ್ಶನಕ್ಕಾಗಿ ಸಾವಿರಾರು ಜನರು ಹರಸಾಹಸಪಟ್ಟರು ಎಂದು ವರದಿ ತಿಳಿಸಿದೆ.

Also Read  ಪುರುಷರಲ್ಲಿ ಪರಸ್ತ್ರೀಯರ ಕಂಟಕ ಹೇಗೆ ಬರುತ್ತದೆ ನಿಮ್ಮ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಪಡೆದುಕೊಳ್ಳಿ

 

error: Content is protected !!
Scroll to Top