ರಫ್ತು ಕುಸಿತ: ಗರಿಷ್ಠ ಮಟ್ಟಕ್ಕೇರಿದ ವ್ಯಾಪಾರ ಕೊರತೆ

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 18. ದೇಶದ ವ್ಯಾಪಾರ ಕೊರತೆ ಕಳೆದ ಆಗಸ್ಟ್ ತಿಂಗಳಲ್ಲಿ ಸರ್ವಕಾಲಿಕ ದಾಖಲೆ ಮಟ್ಟವನ್ನು ತಲುಪಿದೆ. ಚಿನ್ನದ ಆಮದು ದೊಡ್ಡ ಪ್ರಮಾಣದಲ್ಲಿ ಈ ತಿಂಗಳಿನಲ್ಲಿ ಆಗಿರುವ ಕಾರಣದಿಂದ ವ್ಯಾಪಾರ ಕೊರತೆ ಪ್ರಮಾಣ 64.4 ಶತಕೋಟಿ ಡಾಲರ್ ಗಳಿಗೆ ಏರಿದೆ. ಈ ಮಧ್ಯೆ ರಫ್ತು ಮೌಲ್ಯ ಶೇಕಡ 9.4ರಷ್ಟು ಕುಸಿದು 34.7 ಶತಕೋಟಿ ಡಾಲರ್ ಗೆ ಇಳಿದಿದೆ.


ಚಿನ್ನದ ಆಮದು ಒಂದು ತಿಂಗಳ ಅವಧಿಯಲ್ಲಿ ದುಪ್ಪಟ್ಟು ಆಗಿದ್ದು, 10 ಶತಕೋಟಿ ಡಾಲರ್ ಮೌಲ್ಯದ ಚಿನ್ನ ಆಮದಾಗಿದೆ ಎಂದು ವಾಣಿಜ್ಯ ಇಲಾಖೆ ಬಿಡುಗಡೆ ಮಾಡಿದ ಅಂಕಿ ಅಂಶಗಳಿಂದ ತಿಳಿಯುತ್ತದೆ. ಒಟ್ಟು ಆಮದು ಆಗಸ್ಟ್ ನಲ್ಲಿ 64.36 ಶತಕೋಟಿ ಡಾಲರ್ ಗೆ ಹೆಚ್ಚಿದ್ದು, ಇದು ಈ ಹಿಂದಿನ ಸರ್ವಕಾಲಿಕ ದಾಖಲೆಯಾದ 64.35ಕ್ಕಿಂತ ಸ್ವಲ್ಪ ಅಧಿಕ. 2022ರ ಜೂನ್ ನಲ್ಲಿ ಈ ಹಿಂದಿನ ಗರಿಷ್ಠ ಆಮದು ದಾಖಲಾಗಿತ್ತು. ಬೆಲೆ ಏರಿಕೆ, ಕಸ್ಟಮ್ಸ್ ಸುಂಕ ಇಳಿಕೆ, ಹಬ್ಬದ ಸೀಸನ್ ಹಿನ್ನೆಲೆಯಲ್ಲಿ ದಾಸ್ತಾನು ಈ ದಿಢೀರ್ ಏರಿಕೆಗೆ ಕಾರಣ ಎಂದು ವಾಣಿಜ್ಯ ಕಾರ್ಯದರ್ಶಿ ಸುನೀಲ್ ಬರ್ಥ್ವಾಲ್ ಹೇಳಿದ್ದಾರೆ.

 

error: Content is protected !!

Join the Group

Join WhatsApp Group