ಸ್ಕೂಟರ್ ಗೆ ಕಂಟೈನರ್ ಢಿಕ್ಕಿ- ಸಹಸವಾರೆ ಮೃತ್ಯು..!

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 18. ಸ್ಕೂಟರ್ಗೆ ಕಂಟೈನರ್ ಲಾರಿ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ನಲ್ಲಿದ್ದ ಸಹಸವಾರೆ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಕೂಳೂರು ಬಳಿ ನಡೆದಿದೆ.

ಮೃತ ಸಹಸವಾರೆಯನ್ನು ಲಾವಣ್ಯ (27) ಎಂದು ಗುರುತಿಸಲಾಗಿದೆ. ಶಕೀಲ್ ಸುವರ್ಣ ಎಂಬವರು ಪತ್ನಿ ಲಾವಣ್ಯ ಅವರೊಂದಿಗೆ ಪಣಂಬೂರಿನಿಂದ ಕಾವೂರು ಕಡೆಗೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಕೂಳೂರು ನದಿ ಸೇತುವೆಯಲ್ಲಿ ಪಣಂಬೂರು ಕಡೆಯಿಂದ ಬರುತ್ತಿದ್ದ ಕಂಟೈನರ್ ಢಿಕ್ಕಿ ಹೊಡೆಯಿತೆನ್ನಲಾಗಿದೆ. ಇದರಿಂದಾಗಿ ಶಕೀಲ್ ಸುವರ್ಣ ಮತ್ತು ಲಾವಣ್ಯ ಸ್ಕೂಟರ್ ಸಮೇತ ರಸ್ತೆಗೆ ಬಿದಿದ್ದು, ಪರಿಣಾಮ ಕಂಟೈನರ್ನ ಹಿಂಭಾಗದ ಚಕ್ರ ಲಾವಣ್ಯ ಅವರ ತಲೆಯ ಮೇಲೆ ಹರಿದು ಲಾವಣ್ಯ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Scroll to Top