ಸೆ. 21ರಂದು ಅಮೆರಿಕದಲ್ಲಿ ಕ್ವಾಡ್ ಶೃಂಗಸಭೆ – ಪ್ರಧಾನಿ ಮೋದಿ ಭಾಗಿ 

(ನ್ಯೂಸ್ ಕಡಬ) newskadaba.com ವಾಷಿಂಗ್ಟನ್, ಸೆ. 13.  ಅಮೆರಿಕದ ಅಧ್ಯಕ್ಷ ಜೋ ಬೈಡನ್​ ಸೆಪ್ಟೆಂಬರ್ 21 ರಂದು ಡೆಲವೇರ್‌ ನಲ್ಲಿ ನಾಲ್ಕನೇ ವ್ಯಕ್ತಿಗತ ಕ್ವಾಡ್ ನಾಯಕರ ಶೃಂಗಸಭೆಯನ್ನು ಆಯೋಜಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಬೈಡನ್​-ಹ್ಯಾರಿಸ್ ಆಡಳಿತವು 2021 ರಲ್ಲಿ, ಶ್ವೇತಭವನದಲ್ಲಿ ಕ್ವಾಡ್ ನಾಯಕರ ಸಮ್ಮೇಳನವನ್ನು ನಡೆಸಲಾಯಿತು. ಅಂದಿನಿಂದ ಪ್ರತಿ ವರ್ಷ ಈ ಸಮ್ಮೇಳನ ನಡೆಯುತ್ತಿದೆ. ಕ್ವಾಡ್ ಶೃಂಗಸಭೆಯಲ್ಲಿ ಹಿಂದೂ ಮಹಾಸಾಗರ-ಪೆಸಿಫಿಕ್ ಪ್ರದೇಶ, ಮಿಲಿಟರಿ, ಆರೋಗ್ಯ, ನೈಸರ್ಗಿಕ ವಿಕೋಪ, ಸಾಗರ ಭದ್ರತೆ, ಗುಣಮಟ್ಟದ ಮೂಲಸೌಕರ್ಯ, ತಂತ್ರಜ್ಞಾನ ಸೇರಿದಂತೆ ಅನೇಕ ವಿಷಯಗಳ ಕುರಿತು ಚರ್ಚಿಸುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಪ್ರಧಾನಿ ಮೋದಿ ಮುಂದಿನ ವಾರಾಂತ್ಯದಲ್ಲಿ ಮೂರು ದಿನಗಳ ಭೇಟಿಗಾಗಿ ಯುಎಸ್‌ಗೆ ಪ್ರಯಾಣಿಸಲಿದ್ದಾರೆ. ನಾಲ್ಕು ರಾಷ್ಟ್ರಗಳ ಶೃಂಗಸಭೆ ನಡೆಯಲಿರುವ ದಿನವಾದ ಸೆಪ್ಟೆಂಬರ್ 21 ರಂದು ಪ್ರಧಾನಿ ಯುಎಸ್ ತಲುಪಲಿದ್ದಾರೆ ಎಂದು ಹೇಳಲಾಗಿದೆ.

Also Read  'ನಿಯಮ ಉಲ್ಲಂಘಿಸಿ ಅರ್ಲಿಂಗ್‌ ಟನ್ ಪವಿತ್ರ ಭೂಮಿಗೆ ಡೊನಾಲ್ಡ್ ಟ್ರಂಪ್ ಅಗೌರವ’ ಕಮಲಾ ಹ್ಯಾರಿಸ್  ಆರೋಪ         

 

error: Content is protected !!
Scroll to Top