(ನ್ಯೂಸ್ ಕಡಬ) newskadaba.com ಬಂಟ್ವಾಳ, ಸೆ. 13. ನಾಗಮಂಗಲದ ಕೋಮುಗಲಬೆ ಖಂಡಿಸಿ ಬಿಸಿರೋಡ್ನಲ್ಲಿ, ಆರೋಪಿಗಳ ಬಂಧನಕ್ಕೆ ಅಗ್ರಹಿಸಿ ಬೃಹತ್ ಪ್ರತಿಭಟನೆ ನಡೆಯಿತು.
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಒಕ್ಕೂಟ – ಬಂಟ್ವಾಳ ತಾಲೂಕು ಇವರ ವತಿಯಿಂದ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ನಡೆದ ಗಲಭೆಯನ್ನು ಖಂಡಿಸಿ, ಆರೋಪಿಗಳ ಬಂಧನಕ್ಕೆ ಅಗ್ರಹಿಸಿ, ಘಟನೆಯ ಸಮಗ್ರ ತನಿಖೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಯಿತು. ನರಸಿಂಹ ಮಾಣಿ ಮತ್ತು ವಕೀಲರಾದ ಪ್ರಸಾದ್ ಕುಮಾರ್ ಇವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು, ಸಭೆಯಲ್ಲಿ ಪ್ರಶಾಂತ್ ಕೆಂಪುಗುಡ್ಡೆ, ಭರತ್ ಕುಮುಡೆಲು, ಸಮಿತ್ ರಾಜ್ ದರೆಗುಡ್ಡೆ, ಗುರುರಾಜ್ ಬಂಟ್ವಾಳ, ಸಂತೋಷ್ ಸರಪಾಡಿ, ಚೆನ್ನಪ್ಪ ಕೋಟ್ಯಾನ್, ದಿನೇಶ್ ಅಮ್ಟೂರು, ಸುದರ್ಶನ್ ಬಜ, ಪ್ರಭಾಕರ ಪ್ರಭು, ಗೋವಿಂದ ಪ್ರಭು, ಅನೂಪ್ ಮಯ್ಯ, ಚಿದಾನಂದ ಕುಜೀಲಬೆಟ್ಟು, ಸಂದೇಶ್ ಫರಂಗಿಪೇಟೆ, ಗಣೇಶ್ ಕಾಮಾಜೆ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.