ಉಳ್ಳಾಲ: ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ಶಿಕ್ಷಕರ ದಿನಾಚರಣೆ, ಗೌರವ ಸನ್ಮಾನ

(ನ್ಯೂಸ್ ಕಡಬ) newskadaba.com ಉಳ್ಳಾಲ, ಸೆ. 11.  ಶಿಕ್ಷಕರಾಗಿದ್ದವರು ಮಕ್ಕಳನ್ನು ಗೌರವಿಸುವ ಮನೋಭಾವ, ಪರಿಸರ ಪ್ರಜ್ಞೆ ಮೂಡಿಸುವ ಜವಾಬ್ದಾರಿ ಹೆಚ್ಚಾಗ ಬೇಕಿದೆ. ಭಾಷೆಯ ಸ್ಪರ್ಶ, ಮಾನವೀಯತೆ ಸ್ಪರ್ಶ ಎಂದಿಗೂ ಮಕ್ಕಳಲ್ಲಿ ಜಾಗೃತಿಯಾದಾಗ ಮಕ್ಕಳು ಜೀವನದಲ್ಲಿ ಬೆಳೆಯಲು ಸಾಧ್ಯ. ನಾವು ಯಾವ ದಾರಿಯಲ್ಲಿ ಹೋಗುತ್ತೇವೆಯೋ ಅದೇ ದಾರಿಯಲ್ಲಿ ಮಕ್ಕಳು ಹೋಗುತ್ತಾರೆ ಎಂದು ನಿಟ್ಟೆ ವಿವಿ ಮಾನವಿಕ ವಿಭಾಗದ ಮುಖ್ಯಸ್ಥ ಡಾ. ಸಾಯಿಗೀತ ಹೇಳಿದರು.

ಉಳ್ಳಾಲ ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿ ಇದರ ಆಶ್ರಯದಲ್ಲಿ ಕುತ್ತಾರ್ ನಲ್ಲಿ ನಡೆದ ಶಿಕ್ಷಕರ ದಿನಾಚರಣೆ ಹಾಗೂ ಗೌರವ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಾಜಿ ಶಾಸಕ ಜಯರಾಮ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಮತಾ ಗಟ್ಟಿ, ನಿವೃತ್ತ ಮುಖ್ಯ ಶಿಕ್ಷಕಿ ಜಾನಕಿ ಪುತ್ರನ್, ನಿವೃತ್ತ ಮುಖ್ಯ ಶಿಕ್ಷಕರಾದ ಎಂ.ಎಚ್.ಮಲಾರ್, ಎಡಲಿನ್ ಸೆರಾಲಿನ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿ ಗೌರವ ಉಪಾಧ್ಯಕ್ಷ ಸದಾನಂದ ಬಂಗೇರ, ದೇವಕಿ ಉಳ್ಳಾಲ,ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮಿ ಗಟ್ಟಿ, ಕೋಶಾಧಿಕಾರಿ ಆನಂದ ಕೆ
ಅಸೈಗೋಳಿ , ಕೌನ್ಸಿಲರ್ ಜಬ್ಬಾರ್, ಆಲಿಯಬ್ಬ ಉಪಸ್ಥಿತರಿದ್ದರು.

Also Read  ತುಮಕೂರು: ಬೋನಿಗೆ ಬಿದ್ದ ಚಿರತೆ ➤ ನಿಟ್ಟುಸಿರು ಬಿಟ್ಟ ಸಾರ್ವಜನಿಕರು

 

error: Content is protected !!
Scroll to Top