ಅಮೆರಿಕದ ಖ್ಯಾತ ನಟ ಜೇಮ್ಸ್ ಎರ್ಲ್ ಜೋನ್ಸ್ ನಿಧನ

(ನ್ಯೂಸ್ ಕಡಬ) newskadaba.com ವಾಷಿಂಗ್ಟನ್, ಸೆ. 10.  ಅಮೆರಿಕದ ಖ್ಯಾತ ನಟ ಜೇಮ್ಸ್ ಎರ್ಲ್ ಜೋನ್ಸ್ (93) ಅವರು ನಿಧನರಾಗಿದ್ದಾರೆ. ದೀರ್ಘಕಾಲದ ಮಧುಮೇಹದಿಂದ ಬಳಲುತ್ತಿದ್ದ ಜೋನ್ಸ್ ಅವರು ಸೋಮವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ ಎಂದು ಸಹಾಯಕ ಬ್ಯಾರಿ ಮ್ಯಾಕ್ಫರ್ಸನ್ ಹೇಳಿದ್ದಾರೆ ಎಂದು ವರದಿಯಾಗಿದೆ.

ಜೇಮ್ಸ್ ಎರ್ಲ್ ಜೋನ್ಸ್ ಅವರು ‘ದಿ ಲಯನ್ ಕಿಂಗ್’ ಕಾರ್ಟೂನ್ ಚಿತ್ರಕ್ಕೆ ಧ್ವನಿ ನೀಡಿದ್ದಾರೆ. ‘ಸ್ಟಾರ್ ವಾರ್ಸ್ ’ ಸೇರಿದಂತೆ ಹಲವು ಖ್ಯಾತ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಟಿವಿ ಕಾರ್ಯಕ್ರಮಗಳನ್ನು ನಡೆಸಿಕೊಡುವುದರ ಜತೆಗೆ ರಂಗಭೂಮಿ ಕಲಾವಿದರಾಗಿಯೂ ತೊಡಗಿಸಿಕೊಂಡಿದ್ದರು. 1969ರಲ್ಲಿ ದಿ ಗ್ರೇಟ್ ವೈಟ್ಹೋಪ್, 1987ರಲ್ಲಿ ‘ಫೆನ್ಸಸ್’ ಚಿತ್ರಕ್ಕೆ ಪ್ರಶಸ್ತಿ ಲಭಿಸಿತ್ತು. ಆದೇ ರೀತಿ 1991ರಲ್ಲಿ ದೂರದರ್ಶನದಲ್ಲಿ ಪ್ರಸಾರವಾದ ‘ಗೇ ಬ್ರಿಯಲ್ಸ್ ಫೈರ್’, ಹೀಟ್ ವೇವ್’ ಕಾರ್ಯ ಕ್ರಮಗಳು ಜೋನ್ಸ್ ಗೆ ಖ್ಯಾತಿ ತಂದುಕೊಟ್ಟಿದ್ದವು. 2011ರಲ್ಲಿ ಆಸ್ಕರ್ ಪ್ರಶಸ್ತಿಗೆ ಭಾಜನರಾಗಿದ್ದರು ಎನ್ನಲಾಗಿದೆ.

Also Read  ಸುಳ್ಯ: ಆಸ್ಪತ್ರೆಯ ಮಹಡಿಯಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ..!

 

error: Content is protected !!
Scroll to Top