(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 10. ರಾಜ್ಯದಲ್ಲಿ 23 ವಲಯದ ಅಸಂಘಟಿತ ಕಾರ್ಮಿಕರನ್ನು ಈಗಾಗಲೇ ಗುರುತಿಸಿ ಮಂಡಳಿಯಲ್ಲಿ ನೋಂದಾಯಿಸಲು ಹಾಗೂ ಸೌಲಭ್ಯ ವಿತರಿಸುವ ಸಲುವಾಗಿ ವರ್ಗವಾರು ದತ್ತಾಂಶದ ಅವಶ್ಯಕತೆ ಇರುವ ಕಾರಣ ದತ್ತಾಂಶವನ್ನು ಸಂಗ್ರಹಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ.
(ಹಮಾಲರು, ಚಿಂದಿ ಆಯುವವರು, ಮನೆಕೆಲಸದವರು, ಮೆಕಾನಿಕ್, ಟೈಲರ್‍ಗಳು, ಅಗಸರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಕ್ಷೌರಿಕರು, ಭಟ್ಟಿ ಕಾರ್ಮಿಕರು, ಗಿಗ್ ವೃತ್ತಿ ನಿರ್ವಹಿಸುವ ಡೆಲಿವರಿ ಕಾರ್ಮಿಕರು, ದಿನಪತ್ರಿಕೆ ವಿತರಿಸುವ ಕಾರ್ಮಿಕರು, ಫೋಟೋಗ್ರಾಫರ್, ಸ್ವತಂತ್ರ ಲೇಖನ ಬರಹಗಾರರು, ಕಲ್ಯಾಣ ಮಂಟಪ/ ಸಭಾಭವನ/ ಟೆಂಟ್, ಪೆಂಡಾಲ್ ಕೆಲಸ ನಿರ್ವಹಿಸುವ ಎಲ್ಲಾ ಕಾರ್ಮಿಕರು, ಬೀಡಿ ಕಾರ್ಮಿಕರು, ಅಸಂಘಟಿತ ವಿಕಲಚೇತನ ಕಾರ್ಮಿಕರು, ಅಲೆಮಾರಿ ಪಂಗಡ ಕಾರ್ಮಿಕರು, ಸಿನಿ ಕಾರ್ಮಿಕರು, ನೇಕಾರರು, ಬೀದಿ ಬದಿ ವ್ಯಾಪಾರಸ್ಥರು, ಹೋಟೆಲ್ ಕಾರ್ಮಿಕರು, ಮೆಕಾನಿಕ್ ಸೇರಿದಂತೆ ಮೋಟಾರು ಸಾರಿಗೆ ಮತ್ತು ಇತರೆ ಸಂಬಂಧಿತ ಕಾರ್ಮಿಕರು) ಆದುದರಿಂದ ಈ ಬಗ್ಗೆ ಸಂಬಂಧಿಸಿದ ಅಸಂಘಟಿತ ಕಾರ್ಮಿಕರು, ಕಾರ್ಮಿಕ ಭವನ, ಯೆಯ್ಯಾಡಿ, ಶರ್ಬತ್‍ಕಟ್ಟೆ, ಮಂಗಳೂರು ಇಲ್ಲಿ ಕಾರ್ಮಿಕ ಅಧಿಕಾರಿಗಳನ್ನು ಸಂಪರ್ಕಿಸಿ ನೋಂದಾಯಿಸಿಕೊಳ್ಳುವಂತೆ ಕಾರ್ಮಿಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.