ಹೆಣ್ಣುಭ್ರೂಣ ಪತ್ತೆ- ಹತ್ಯೆ ಪ್ರಕರಣ  ಮೂವರು ಆರೋಪಿಗಳು ಅರೆಸ್ಟ್..!   

(ನ್ಯೂಸ್ ಕಡಬ) newskadaba.com ಮಂಡ್ಯ, ಸೆ. 10.  ಜಿಲ್ಲೆಯ ಪಾಂಡವಪುರ, ಬೆಳ್ಳೂರು, ಮೇಲುಕೋಟೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಹೆಣ್ಣುಭ್ರೂಣ ಪತ್ತೆ ಮತ್ತು ಹತ್ಯೆ ಪ್ರಕರಣ ಸಂಬಂಧ ಮತ್ತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಆರೋಪಿಗಳನ್ನು ಮೈಸೂರಿನ ರಾಘವೇಂದ್ರ ಬಡಾವಣೆ ನಿವಾಸಿಯಾದ ಹುಣಸೂರು, ಕೆ.ಆರ್.ನಗರದಲ್ಲಿನ ಅಶ್ವಿನಿ ಡಯಾಗ್ನಸ್ಟಿಕ್ ಸೆಂಟರ್‍ನ ಶಂಕರ ಜಿ.ಎನ್., ಪಾಂಡವಪುರ ತಾಲೂಕು ಹಿರೇಮರಳಿ ಗ್ರಾಮದ ನವೀನ್ ಎಚ್.ಕೆ. ಹಾಗೂ ಪಾಂಡವಪುರ ತಾಲೂಕು ಹರಳಹಳ್ಳಿ ಗ್ರಾಮದ ಜಬ್ಬರ್ ಎಂದು ಗುರುತಿಸಲಾಗಿದೆ. ಪ್ರಕರಣದ ಈ ಆರೋಪಿಗಳನ್ನು ರವಿವಾರ ಬಂಧಿಸಿ ಅವರಿಂದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಉಳಿದ ಆರೋಪಿಗಳ ಶೋಧಕಾರ್ಯ ಮುಂದುವರಿದಿದೆ ಎಂದು ಪೊಲೀಸ್ ತನಿಖಾ ತಂಡದ ವರದಿ ಪ್ರಕಟನೆ ತಿಳಿಸಿದೆ.

Also Read  ಕಾರ್ಕಳ :ವಾಹನದ ಟಯರ್ ಸಿಡಿದು ಯುವಕ ಮೃತ್ಯು

 

error: Content is protected !!
Scroll to Top