ಗಣೇಶ ವಿಸರ್ಜನೆಗೆ ಕಾವೇರಿ ನೀರು ಬಳಸುವಂತಿಲ್ಲ – ಬಿಡಬ್ಲ್ಯೂಎಸ್.ಎಸ್ಬಿ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 06. ಗಣೇಶ ಮೂರ್ತಿ ವಿಸರ್ಜನೆಗೆ ಕಾವೇರಿ ನೀರು ಬಳಸುವಂತಿಲ್ಲ. ಎಲ್ಲಾದರೂ ಒಂದು ವೇಳೆ ಕಾವೇರಿ ನೀರನ್ನು ಬಳಕೆ ಮಾಡಿದಲ್ಲಿ ಅಂಥವರಿಗೆ ದಂಡ ವಿಧಿಸಲಾಗುವುದು ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್ಬಿ) ಎಚ್ಚರಿಕೆ ನೀಡಿದೆ.

ಕಾವೇರಿ ನೀರನ್ನು ನಗರದ ಜನತೆಗೆ ಕುಡಿಯಲು ಹಾಗೂ ನಿತ್ಯ ಬಳಕೆಗೆ ಉಪಯೋಗಿಸಲು ಮಾತ್ರ ಸರಬರಾಜು ಮಾಡಲಾಗುತ್ತದೆ. ರಾಜ್ಯದಲ್ಲಿ ಕಳೆದ ವರ್ಷ ಆವರಿಸಿದ್ದ ಬರಗಾಲದಿಂದಾಗಿ ಜನವರಿಯಿಂದ ಜೂನ್ ವರೆಗೆ ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಆಹಾಕಾರ ಶುರುವಾಗಿತ್ತು. ವೇಳೆ ಕಾವೇರಿ ನೀರನ್ನು ಕುಡಿಯಲು ಮತ್ತು ದಿನಬಳಕೆಗೆ ಬಿಟ್ಟರೆ ಬೇರೆ ಯಾವ ಉದ್ದೇಶಕ್ಕೂ ಕೂಡಾ ಬಳಕೆ ಮಾಡದಂತೆ ನಿರ್ಬಂಧ ಹೇರಲಾಗಿತ್ತು. ಮನೆಯ ಮುಂದಿನ ಗಾರ್ಡನ್, ಕೈತೋಟ, ಹೂ ಕುಂಡಗಳುಬೈಕ್ ಮತ್ತು ಕಾರನ್ನು ತೊಳೆಯಲು, ಕಟ್ಟಡ ನಿರ್ಮಾಣ ಕಾರ್ಯಕ್ಕೆ ಕಾವೇರಿ ನೀರನ್ನು ಬಳಸದಂತೆಯೂ ಕಠಿಣ ಆದೇಶ ಹೊರಡಿಸಲಾಗಿತ್ತು. ಜೊತೆಗೆ, ನಿರ್ಬಂಧದ ನಡುವೆಯೂ ಕಾವೇರಿ ನೀರನ್ನು ದುರುಪಯೋಗ ಮಾಡಿದ್ದವರಿಗೆ ದಂಡವನ್ನೂ ವಿಧಿಸಲಾಗಿತ್ತು. ಹಾಗಾಗಿ ಕಾವೇರಿ ನೀರನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡುವುದನ್ನು ತಡೆಯುವ ನಿಟ್ಟಿನಲ್ಲಿ ಬೆಂಗಳೂರು ಜಲಮಂಡಳಿ ಕಠಿಣ ಕ್ರಮವನ್ನು ಕೈಗೊಂಡಿದೆ.

Also Read  ಚಾಲಕನ ನಿಯಂತ್ರಣ ತಪ್ಪಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ

 

ಈಗಾಗಲೇ ಕುಡಿಯುವ ನೀರನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡಿದವರಿಗೆ ನಿಯಮದಂತೆ ದಂಡ ವಿಧಿಸಲಾಗುತ್ತಿದೆಇದೀಗ ಗೌರಿ ಗಣೇಶ ಹಬ್ಬದ ವೇಳೆಯೂ ಅನ್ಯ ಉದ್ದೇಶಕ್ಕೆ ಬಳಕೆ ಮಾಡುವರ ಮೇಲೆ ಕ್ರಮಕ್ಕೆ ನಿರ್ಧರಿಸಲಾಗಿದೆ

error: Content is protected !!
Scroll to Top