ಮಂಗಳೂರು: ಬಸ್ ನಿಲ್ದಾಣದ ಮೇಲ್ಛಾವಣಿ ಕಾಮಗಾರಿಗೆ ಶಿಲಾನ್ಯಾಸ

(ನ್ಯೂಸ್ ಕಡಬ) newskadaba.com  ಮಂಗಳೂರು, ಸೆ. 6. ನಗರದ ಹಂಪನಕಟ್ಟೆಯ ಸರ್ವಿಸ್ ಬಸ್ ನಿಲ್ದಾಣದಲ್ಲಿ ಬಾಕಿ ಇರುವ ಮೇಲ್ಛಾವಣಿ ಕಾಮಗಾರಿಗೆ ಶಿಲಾನ್ಯಾಸವನ್ನು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ನೆರವೇರಿಸಿದರು. ಶಾಸಕ ವೇದವ್ಯಾಸ ಕಾಮತ್, ಉಪ ಮೇಯರ್ ಸುನಿತಾ, ಪ್ರತಿಪಕ್ಷದ ನಾಯಕ ಪ್ರವೀಣ್ ಚಂದ್ರ ಆಳ್ವ, ಸದಸ್ಯರಾದ ದಿವಾಕರ ಪಾಂಡೇಶ್ವರ, ಗಣೇಶ್ ಕುಲಾಲ್, ಶೈಲೇಶ್, ಸಂದೀಪ್ ಗರೋಡಿ, ಸಾಮಾಜಿಕ ಕಾರ್ಯಕರ್ತ ಜಿ.ಕೆ.ಭಟ್ಬಸ್ ಮಾಲೀಕರ ಸಂಘದ ಅಧ್ಯಕ್ಷ ಅಝೀಝ್ ಪಾರ್ತಿಪ್ಪಾಡಿ, ಉಪಾಧ್ಯಕ್ಷ ರಾಮಚಂದ್ರ ನಾಯ್ಕ್, ಜಯಶೀಲ ಅಡ್ಯಂತಾಯ, ಸ್ಮಾರ್ಟ್‌ಸಿಟಿ ಜನರಲ್ ಮೆನೇಜರ್ ಅರುಣ್ ಪ್ರಭ ಉಪಸ್ಥಿತರಿದ್ದರು.

ಸರ್ವಿಸ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಎರಡು ಬಸ್ ಶೆಲ್ಟರ್‌ ಗಳನ್ನು ನಿರ್ಮಿಸಲಾಗಿದೆ. ಎಲ್ಲ ಕಡೆಗಳಿಂದ ಆಗಮಿಸುವ ಪ್ರಯಾಣಿಕರಿಗೆ ಈ ಶೆಲ್ಟರ್ ಪ್ರಯೋಜನವಾಗಲಿದೆ. ಒಂದು ಶೆಲ್ಟರ್ ತಲಾ 85 ಮೀಟರ್ ಉದ್ದ ಇದ್ದು, 3 ಮೀಟರ್ ಅಗಲ ಹಾಗೂ 4.25 ಮೀಟರ್ ವಿಸ್ತಾರ ಇರಲಿದೆ. ಒಂದು ಬದಿಯಲ್ಲಿ ಆರರಂತೆ ಒಟ್ಟು 12 ಬಸ್‌ಗಳಿಗೆ ನಿಲ್ಲಲು ಅವಕಾಶ ಇದೆ. ಈ ರೀತಿ ಒಟ್ಟು ಐದೂವರೆ ಶೆಲ್ಟರ್‌ಗಳಿದ್ದು, ಏಕಕಾಲದಲ್ಲಿ ಒಟ್ಟು 66 ಬಸ್ ನಿಲುಗಡೆ ಸಾಧ್ಯ. ಪಾಲಿಕೆ ಎರಡು ಶೌಚಾಲಯಗಳು ನಿರ್ಮಾಣವಾಗಲಿದ್ದು, ಆಸನದ ವ್ಯವಸ್ಥೆ, ಕುಡಿಯುವ ನೀರು ಸೇರಿದಂತೆ  ಅಗತ್ಯ ಮೂಲಭೂತ ಸೌಕರ್ಯಗಳು 3 ಕೋಟಿ ರೂ. ವೆಚ್ಚದಲ್ಲಿ ಮೂರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಮೇಯರ್ ಸುಧೀರ್ ಶೆಟ್ಟಿ ತಿಳಿಸಿದರು.

error: Content is protected !!

Join the Group

Join WhatsApp Group