ಆಲಂಕಾರು: ದ್ವಿಚಕ್ರ ವಾಹನಗಳ ನಡುವೆ ಅಪಘಾತ – ಸವಾರರಿಬ್ಬರಿಗೆ ಗಾಯ



(ನ್ಯೂಸ್ ಕಡಬ) newskadaba.com ಪುತ್ತೂರು, ಸೆ. 06. ದ್ವಿಚಕ್ರ ವಾಹನಗಳ ಮಧ್ಯೆ ಅಪಘಾತ ಸಂಭವಿಸಿದ ಪರಿಣಾಮ ಸವಾರರಿಬ್ಬರು ಗಾಯಗೊಂಡ ಘಟನೆ ಆಲಂಕಾರು ಕಜೆ ಎಂಬಲ್ಲಿ ಶುಕ್ರವಾರದಂದು ನಡೆದಿದೆ.








ಗಾಯಗೊಂಡವರನ್ನು ಜಯಂತ ಪೂಜಾರಿ ಹಾಗೂ ದಿನೇಶ್ ಬುಡೇರಿ ಎಂದು ಗುರುತಿಸಲಾಗಿದೆ. ಆಕ್ಟಿವಾ ಹಾಗೂ ಪಲ್ಸರ್ ನಡುವೆ ನಡೆದ ಢಿಕ್ಕಿಯ ರಭಸಕ್ಕೆ ಸವಾರರಿಬ್ಬರು ರಸ್ತೆಗೆಸೆಯಲ್ಪಟ್ಟಿದ್ದಾರೆ. ಪರಿಣಾಮ ಆಕ್ಟಿವಾ ಸವಾರ ಜಯಂತ ಪೂಜಾರಿ ಅವರ ತಲೆಗೆ ಹಾಗೂ ಬೈಕ್ ಸವಾರ ದಿನೇಶ್ ಅವರ ಕಾಲಿಗೆ ಗಾಯವಾಗಿದೆ. ಇಬ್ಬರನ್ನೂ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಗಿರುವುದಾಗಿ ತಿಳಿದುಬಂದಿದೆ.






 

 

error: Content is protected !!
Scroll to Top