(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 05. ಚುನಾವಣಾ ಸಂದರ್ಭ ಐದು ಗ್ಯಾರಂಟಿಗಳನ್ನು ಘೋಷಿಸಿ ಅಧಿಕಾರಿಕ್ಕೇರಿದಾಗ ನುಡಿದಂತೆ ನಡೆದ ಕಾಂಗ್ರೆಸ್ ಸರಕಾರಕ್ಕೆ ಅನ್ನಭಾಗ್ಯದಡಿಯಲ್ಲಿ 10 ಕೆಜಿ ಅಕ್ಕಿ ನೀಡಲು ಕೇಂದ್ರ ಸರಕಾರ ಒಪ್ಪಿರಲಿಲ್ಲ. ಹೀಗಾಗಿ ಐದು ಕೆಜಿ ಅಕ್ಕಿ ಹಾಗೂ ಉಳಿದ ಅಕ್ಕಿಗೆ ಬದಲಾಗಿ ಹಣವನ್ನು ವಿತರಣೆ ಮಾಡಿತ್ತು.
ಇದೀಗ ಇನ್ಮುಂದೆ ಬಿಪಿಎಲ್ ಪಡಿತರದಾರರಿಗೆ ಹೆಚ್ಚುವರಿ 5kg ಅಕ್ಕಿಗೆ ಪರ್ಯಾಯವಾಗಿ ಹಣದ ಬದಲು ಆಹಾರ ಕಿಟ್ ನೀಡುವುದಕ್ಕೆ ರಾಜ್ಯ ಸರ್ಕಾರ ತೀರ್ಮಾನಿಸಿದ್ದು ಈ ಬಗ್ಗೆ ಇಂದು ನಡೆಯಲಿರುವ ಸಂಪುಟ ಸಭೆಯಲ್ಲಿ ಅಧಿಕೃತ ನಿರ್ಧಾರವಾಗುವ ಸಾಧ್ಯತೆಯಿದೆ. ಈಗ ರಾಗಿ, ಗೋಧಿ, ಎಣ್ಣೆ ಸೇರಿ 5 kg ಆಹಾರ ಧಾನ್ಯ ನೀಡಲು ನಿರ್ಧರಿಸಲಾಗಿರುವುದಾಗಿ ತಿಳಿದುಬಂದಿದೆ.