(ನ್ಯೂಸ್ ಕಡಬ) newskadaba.com ಕಾರ್ಕಳ, ಸೆ. 03. ಮನೆಯೊಂದರ ಬೀಗ ತೆಗೆದು ಚಿನ್ನ ಕಳ್ಳತನ ಪ್ರಕರಣದ ಆರೋಪಿಯನ್ನು ಕದ್ದ ವಸ್ತು ಸಹಿತ ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಬಂಧಿತನನ್ನು ಮಾಳ ಗ್ರಾಮದಲ್ಲಿ ವಾಸ್ತವ್ಯವಿರುವ ತಂಗಚ್ಚನ್ ಮಗ ಸಂತೋಷ್ ಟಿ ಎಂದು ಗುರುತಿಸಲಾಗಿದೆ. ಆಗಸ್ಟ್ ಮೂವತ್ತರಂದು ಕಾರ್ಕಳ ತಾಲೂಕು ಮುಡಾರು ಗ್ರಾಮದ ಗುರ್ಗಾಲ್ ಗುಡ್ಡೆಯ ಮನೆಯೊಂದರ ಬೀಗ ತೆರೆದು ಬೆಡ್ ರೂಂನ ಲಾಕರ್ ನಲ್ಲಿದ್ದ ಸುಮಾರು 10,05,000 ರೂ. ಮೌಲ್ಯದ 33 ಪವನ್ ವಿವಿಧ ರೀತಿಯ ಚಿನ್ನಾಭರಣ ಕಳವಾಗಿತ್ತು. ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ಬಂಧಿಸುವ ನಿಟ್ಡಿನಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು 33 ಪವನ್ ಚಿನ್ನ ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ ಸಹಿತ ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದೆ.













