ಎರಡು ಪ್ರತ್ಯೇಕ ಸೈಬರ್ ವಂಚನೆ ಪ್ರಕರಣ- 25 ಲಕ್ಷಕ್ಕೂ ಅಧಿಕ ನಷ್ಟ

(ನ್ಯೂಸ್ ಕಡಬ) newskadaba.com ಉಡುಪಿ, ಸೆ. 03.  ಬ್ರಹ್ಮಾವರ ಮತ್ತು ಉಡುಪಿಯಲ್ಲಿ ಎರಡು ಪ್ರತ್ಯೇಕ ಸೈಬರ್ ವಂಚನೆ ಪ್ರಕರಣಗಳು ವರದಿಯಾಗಿದ್ದು, ಒಟ್ಟು 25 ಲಕ್ಷಕ್ಕೂ ಅಧಿಕ ಆರ್ಥಿಕ ನಷ್ಟವಾಗಿದೆ.

ಮೊದಲ ಪ್ರಕರಣದಲ್ಲಿ ಬ್ರಹ್ಮಾವರದ ವರಂಬಳ್ಳಿ ಗ್ರಾಮದ ಅಲಿಶಾ (26) ಎಂಬುವವರಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸಲಾಗಿದೆ. ಮೇ 29 ರಿಂದ ಆಗಸ್ಟ್ 16 ರ ನಡುವೆ, ಆರೋಪಿಯ ಖಾತೆಗೆ ದೂರುದಾರರು 8,96,448 ರೂ. ವರ್ಗಾಯಿಸಿದ್ದಾರೆ. ಈ ಕುರಿತು ಸೈಬರ್ ಕ್ರೈಂಗೆ ದೂರು ದಾಖಲಿಸಲು ವೆಬ್‌ಸೈಟ್ ಸಂಪರ್ಕಿಸಿದಾಗ ಅದರಲ್ಲಿಯೂ 37,000 ರೂ. ಆನ್ ಲೈನ್ ವರ್ಗಾವಣೆ ಮಾಡಿಸಿಕೊಂಡು ವಂಚಿಸಲಾಗಿದೆ. ಎರಡನೇ ಪ್ರಕರಣದಲ್ಲಿ ಉಡುಪಿಯ ಬೈಲಕೆರೆಯ ಎಸ್.ಅಬ್ದುಲ್ ರಹೀಮನ್ ಸಾಹೇಬ್ (67) ಅವರಿಗೆ ಷೇರು ಮಾರುಕಟ್ಟೆಯ ಲಾಭಾಂಶಗಳ ಆಮಿಷ ತೋರಿಸಿ ಲಕ್ಷಾಂತರ ರೂ. ವಂಚಿಸಲಾಗಿದೆ. ಅವರು ಜುಲೈ 24 ರಿಂದ ಆಗಸ್ಟ್ 26 ರ ನಡುವೆ ಹಂತ ಹಂತವಾಗಿ 16,10,000 ರೂ. ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಿದ್ದಾರೆ. ಬಳಿಕ ಆರೋಪಿಯು ಹೂಡಿಕೆ ಮಾಡಿದ ಹಣ ಅಥವಾ ಲಾಭಾಂಶವನ್ನಾಗಲಿ ನೀಡದೆ ವಂಚಿಸಿದ್ದಾನೆ. ಇನ್ನು ಈ ಎರಡೂ ಪ್ರಕರಣಗಳು ತನಿಖೆ ಹಂತದಲ್ಲಿದ್ದು, ಆನ್‌ಲೈನ್ ವಂಚನೆಗಳ ಬಗ್ಗೆ ಜಾಗರೂಕರಾಗಿರಲು ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ.

Also Read  ಶಿಶುವಿಹಾರದಲ್ಲಿ ಚೂರಿಯಿರಿತ- 3 ಮಕ್ಕಳ ಸಹಿತ 6 ಮಂದಿ ಮೃತ್ಯು

error: Content is protected !!
Scroll to Top