ಪ್ಯಾರಾಲಿಂಪಿಕ್ಸ್: ನಿಶಾದ್ ಕುಮಾರ್ ಗೆ ಬೆಳ್ಳಿ ಪದಕ- ಪ್ರೀತಿ ಪಾಲ್ ಗೆ ಕಂಚಿನ ಪದಕ

(ನ್ಯೂಸ್ ಕಡಬ) newskadaba.com ಪ್ಯಾರಿಸ್, ಸೆ. 02. ಪ್ಯಾರಾಲಿಂಪಿಕ್ಸ್ ನ ಪುರುಷರ ಹೈ ಜಂಪ್ ಟಿ47 ಸ್ಪರ್ಧೆಯಲ್ಲಿ ಭಾರತದ ನಿಶಾದ್ ಕುಮಾರ್ ಬೆಳ್ಳಿ ಪದಕ ಪಡೆದುಕೊಂಡರೆ, ಅಥ್ಲೆಟಿಕ್ಸ್ ನಲ್ಲಿ ಪ್ರೀತಿ ಪಾಲ್ ಕಂಚಿನ ಪದಕ ಗೆದ್ದಿದ್ದಾರೆ.

ಅಮೆರಿಕದ ಟೌನ್ಸೆಂಡ್ 2.12 ಮೀ ಎತ್ತರ ಜಿಗಿದು ಚಿನ್ನದ ಪದಕ ಗೆದ್ದುಕೊಂಡರೆ, ರಷ್ಯಾದ ಜಾರ್ಜಿ ಮಾರ್ಗೀವ್ ಕಂಚಿನ ಪದಕ ಪಡೆದುಕೊಂಡಿದ್ದಾರೆ. ನಿಶಾದ್ ಕುಮಾರ್ 3 ವರ್ಷಗಳ ಹಿಂದೆ ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಇದೇ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.

ಇನ್ನು ಪ್ರೀತಿ ಪಾಲ್ ಅವರು 200 ಮೀಟರ್ ಓಟದಲ್ಲಿ (ಟಿ35 ವಿಭಾಗ) 3ನೇ ಸ್ಥಾನ ಗೆದ್ದಿದ್ದರು. ನಿನ್ನೆ ನಡೆದ ಸ್ಪರ್ಧೆಯಲ್ಲಿ ಅವರು 30.01 ಸೆಕೆಂಡ್‌ ಗಳಲ್ಲಿ ವೈಯಕ್ತಿಕ ಶ್ರೇಷ್ಠ ಸಮಯದೊಂದಿಗೆ ತಮ್ಮ ಗುರಿ ಸಾಧಿಸಿದರು. ಶುಕ್ರವಾರ ಮಹಿಳೆಯರ 100 ಮೀ ಓಟ (ಟಿ35) ವಿಭಾಗದಲ್ಲೂ ಪ್ರೀತಿ ಪಾಲ್ ಕಂಚಿನ ಪದಕ ಗಳಿಸಿದ್ದರು. ಈ ಮೂಲಕ ಪ್ರೀತಿ, ಟ್ರ‍್ಯಾಕ್ ಮತ್ತು ಫೀಲ್ಡ್ ನಲ್ಲಿ ಎರಡು ಪದಕಗಳನ್ನು ಗೆದ್ದ ಭಾರತದ ಮೊದಲ ಮಹಿಳಾ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Also Read  ವಿಮಾನದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

 

 

error: Content is protected !!
Scroll to Top