ರೈತ ಸಂಘಟನೆಯ ಮುಖಂಡರ 66 ನೇ ಹುತಾತ್ಮ ದಿನಾಚರಣೆ

(ನ್ಯೂಸ್ ಕಡಬ) newskadaba.com ಪೈವಳಿಕೆ, ಸೆ. 02.  ಜಮೀನ್ದಾರಿ ವ್ಯವಸ್ಥೆಯ ವಿರುದ್ಧ ಹೋರಾಟ ನಡೆಸಿ ಭೂ ಮಾಲೀಕರ ಗುಂಡು ತಗುಲಿ ಹುತಾತ್ಮರಾದ ಪೈವಳಿಕೆ ಕಮ್ಯುನಿಸ್ಟ್ – ರೈತ ಸಂಘಟನೆಯ ಮುಖಂಡರಾದ ಸುಂದರ ಶೆಟ್ಟಿ, ಮಹಾಬಲ ಶೆಟ್ಟಿ, ಚೆನ್ನಪ್ಪ ಶೆಟ್ಟಿ ಅವರ 66 ನೇ ಹುತಾತ್ಮ ದಿನಾಚರಣೆ ಮೆರವಣಿಗೆ ಹಾಗೂ ಸಾರ್ವಜನಿಕ ಸಭೆಯು ಪೈವಳಿಕೆಯಲ್ಲಿ ನಡೆಯಿತು.

ಸಿಪಿಐಎಂ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಪಿ.ಕೆ ಬಿಜು ಉದ್ಘಾಟಿಸಿದರು. ಚಂದ್ರ ನಾಯ್ಕ ಮಣಿಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಸಿಪಿಐಎಂ ಜಿಲ್ಲಾ ಕಾರ್ಯಕಾರಣಿ ಸಮಿತಿ ಸದಸ್ಯ ಕೆ.ಆರ್ ಜಯಾನಂದ,ಅಬ್ದುಲ್ ರಝಾಕ್ ಚಿಪ್ಪಾರು, ಚಂದ್ರಹಾಸ ಶೆಟ್ಟಿ ಮಾಸ್ಟರ್,ಪೈವಳಿಕೆ ಪಂಚಾಯತ್ ಅಧ್ಯಕ್ಷೆ ಜಯಂತಿ.ಕೆ, ವರ್ಕಾಡಿ ಪಂಚಾಯತ್ ಅಧ್ಯಕ್ಷೆ ಭಾರತಿ ಸುಳ್ಯಮೆ, ,ಬೇಬಿ ಶೆಟ್ಟಿ,ಅಬ್ದುಲ್ಲಾ.ಕೆ,ಪುರುಷೋತ್ತಮ ಬಳ್ಳೂರು,ವಿನಯ್ ಕುಮಾರ್,ಅಶೋಕ್ ಭಂಡಾರಿ ಮತ್ತಿತರರು ಪಾಲ್ಗೊಂಡಿದ್ದರು. ಅಬ್ದುಲ್ ಹಾರಿಸ್ ಸ್ವಾಗತಿಸಿದರು ಎಂದು ವರದಿಯಾಗಿದೆ.

Also Read  ಉದ್ವಿಗ್ನಗೊಂಡ ಪೌರತ್ವದ ಬಿಸಿ ➤ ಮಂಗಳೂರು ಕಮಿಷನರ್ ಡಾ‌| ಹರ್ಷರವರಿಂದ ಪತ್ರಿಕಾಗೋಷ್ಠಿ

 

error: Content is protected !!
Scroll to Top