ಅನ್ನಭಾಗ್ಯ ಯೋಜನೆಗೆ ಮತ್ತೆ ಅಕ್ಕಿ ಸಂಕಷ್ಟ ಆಹಾರ ನಾಗಾರೀಕ ಸರಬರಾಜು ಇಲಾಖೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಸಚಿವರನ್ನು ಭೇಟಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 31.  ಅನ್ನಭಾಗ್ಯ ಯೋಜನೆಗೆ ಮತ್ತೆ ಸಂಕಷ್ಟ ಎದುರಾಗಿದ್ದು, ಇದೀಗ ಮತ್ತೆ ಅಕ್ಕಿ ಕೊರತೆ ಎದುರಾಗಿದೆ. ಒಂದೂವರೆ ಕೋಟಿ ಬಿಪಿಎಲ್ ಫಲಾನುಭವಿಗಳ ಪೈಕಿ 13 ಲಕ್ಷದ 45 ಸಾವಿರ ಫಲಾನುಭವಿಗಳಿಗೆ ಅಕ್ಕಿಯ ಕೊರತೆ ಎದುರಾಗಿದೆ.

ಅನ್ನಭಾಗ್ಯ ಯೋಜನೆಗೆ ಕೇಂದ್ರದಿಂದ 2.36 ಲಕ್ಷ ಟನ್ ಅಕ್ಕಿ ನೀಡಿದರೂ ಮತ್ತೆ ಅಕ್ಕಿ ಕೊರತೆ ಎದುರಾಗಿದೆ. ಈ ತಿಂಗಳು ಡಿಬಿಟಿ ಹಣದ ಬದಲು ಅಕ್ಕಿಯನ್ನೆ ಕೊಡಲು ನಿರ್ಧರಿಸಿದ್ದ ಆಹಾರ ನಾಗರೀಕ ಸರಬರಾಜು ಇಲಾಖೆಗೆ ಮತ್ತೊಂದು ತೊಂದರೆ ಎದುರಾಗಿದೆ. ಕೇಂದ್ರ ಸರ್ಕಾರ 2.36 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನ ಮುಂದಿನ ಮಾರ್ಚ್ ವರೆಗೂ ಕೊಡಲು ನಿರ್ಧರಿಸಿದೆ. ಆದ್ರೆ ಇಷ್ಟು ಅಕ್ಕಿ ಕೊಟ್ರು 13 ಲಕ್ಷದ 45 ಸಾವಿರ ಜನರಿಗೆ ಅಕ್ಕಿಯ ಕೊರತೆ ಎದುರಾಗಿದ್ದು, ಮತ್ತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಸಚಿವರನ್ನ ಭೇಟಿಯಾಗಲು ಆಹಾರ ನಾಗಾರೀಕ ಸರಬರಾಜು ಇಲಾಖೆ ಮುಂದಾಗಿದೆ ಎಂದು ವರದಿಯಾಗಿದೆ.

Also Read  ಮಂಗಳೂರು ಏರ್ಪೋರ್ಟ್ ರನ್ ವೇ ತಪಾಸಣೆಗೆ ಕಾರ್ಯಪಡೆ ರಚನೆ

 

error: Content is protected !!
Scroll to Top