ಅಕ್ಟೋಬರ್‌ನಿಂದ ದೆಹಲಿಯಲ್ಲಿ ಕರ್ನಾಟಕ ಹಾಲು ಒಕ್ಕೂಟ (KMF) ಹಾಲು ಮತ್ತು ಮೊಸರು ಮಾರಾಟ ಪ್ರಾರಂಭ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 31.  ನಾಡಿನಾದ್ಯಂತ ಮನೆ ಮನೆಗಳಲ್ಲಿ ಚಿರಪಿತವಾಗಿರುವ ನಂದಿನಿ KMF ಹಾಲು ಇದೀಗ ಉತ್ತರ ಭಾರತಕ್ಕೂ ಲಗ್ಗೆ ಇಡುತ್ತಿದೆ. ಅಕ್ಟೋಬರ್‌ನಲ್ಲಿ ದೆಹಲಿಯಲ್ಲಿ ಹಾಲು ಮತ್ತು ಮೊಸರು ಮಾರಾಟವನ್ನು ಕರ್ನಾಟಕ ಹಾಲು ಒಕ್ಕೂಟ (KMF) ಪ್ರಾರಂಭಿಸಲಿದೆ.

ದೇಶದ ಬಹುತೇಕ ಭಾಗಗಳಲ್ಲಿ ಹಸುವಿನ ಹಾಲಿನ ಬೇಡಿಕೆ ಮತ್ತು ಬಳಕೆ ಹೆಚ್ಚುತ್ತಿದ್ದು, ಇದು ಕೆಎಂಎಫ್ ತನ್ನ ವ್ಯವಹಾರವನ್ನು ವಿಸ್ತರಿಸಲು ಸೂಕ್ತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೊದಲ ಆರು ತಿಂಗಳ ಕಾಲ ನಿತ್ಯ ಸುಮಾರು 2 ಲಕ್ಷ ಲೀಟರ್ ಹಾಲು ಮಾರಾಟ ಮಾಡಿ ಕ್ರಮೇಣ ಅದನ್ನು ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ.ಜಗದೀಶ್ ತಿಳಿಸಿದರು. ಕಂಪನಿ ಗುಡ್‌ಲೈಫ್ ಬ್ರಾಂಡ್‌ ಮಾತ್ರವಲ್ಲದೆ ಪ್ರತಿದಿನವೂ ಮಾರಾಟದೊಂದಿಗೆ ನೇರ ಮಾರಾಟಕ್ಕಾಗಿ ಉತ್ತರ ಭಾರತದ ರಾಜ್ಯಗಳತ್ತ ಸಾಗುತ್ತಿರುವುದು ಇದೇ ಮೊದಲು ಎಂದು ಕೆಎಂಎಫ್ ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.

Also Read  ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾಗಿ ದಿನೇಶ್ ಗುಂಡೂರಾವ್ ನೇಮಕ

 

error: Content is protected !!
Scroll to Top