ನಾಳೆ (ಫೆ.27) ಮರ್ಧಾಳ ಬೆಥನಿ ಜೀವನ್ ಜ್ಯೋತಿ ವಿಶೇಷ ಶಾಲಾ ದಶಮಾನೋತ್ಸವ ಸಂಭ್ರಮ

(ನ್ಯೂಸ್ ಕಡಬ) newskadaba.com ಕಡಬ, ಫೆ.26. ಮರ್ಧಾಳ ಜೀವನ್ ಜ್ಯೋತಿ ವಿಶೇಷ ಶಾಲೆಯ ವಾರ್ಷಿಕೋತ್ಸವ ಮತ್ತು ದಶಮಾನೋತ್ಸವ ಸಂಭ್ರಮವು ಫೆ.27 ಮಂಗಳವಾರದಂದು ನಡೆಯಲಿದೆ.

ಕುಕ್ಕೇ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥಪಾದಂಗಳವರು ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ. ಬೆಥನಿ ಸಮೂಹ ಸಂಸ್ಥೆಗಳ ಪ್ರೊವಿನ್ಸಿಯನ್ ಸುಪೀರಿಯರ್ ರೆ|ಫಾ| ವಿಲಿಯಂ ನೆಡುಂಪುರತ್ ಒಐಸಿ ಅಧ್ಯಕ್ಷತೆ ವಹಿಸಲಿದ್ದಾರೆ. ಕುಕ್ಕೇಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಮೂಡಬಿದ್ರೆ ವಕೀಲರ ಸಂಘದ ಉಪಾಧ್ಯಕ್ಷ ನ್ಯಾಯವಾದಿ ನಾಗೇಶ್ ಶೆಟ್ಟಿ, ಬೆಥನಿ ಸಂಸ್ಥೆಯ ಸಂಚಾಲಕ ರೆ|ಫಾ| ಸತ್ಯನ್ ತೋಮಸ್ ಒಐಸಿ, ಮಾಜಿ ನಿರ್ದೇಶಕರಾದ ರೆ|ಫಾ| ಝಕಾರಿಯಸ್ ನಂದಿಯಟ್ಟು ಒಐಸಿ, ಬೆಥನಿ ಆಶ್ರಮ ಮೇಲ್ವಿಚಾರಕರಾದ ರೆ|ಫಾ| ಪೀಟರ್ ಜೋನ್ ಒಐಸಿ, ಬಂಟ್ರ ಗ್ರಾ.ಪಂ.ಅಧ್ಯಕ್ಷೆ ಲಲಿತಾ ಎಂ. ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಜೀವನ್ ಜ್ಯೋತಿ ವಿಶೇಷ ಶಾಲಾ ನಿರ್ದೇಶಕರಾದ ರೆ|ಫಾ| ವಿಜೋಯಿ ವರ್ಗೀಸ್ ಒಐಸಿ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಶೈಲಾ ಪಿ.ಜೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ➤ ಶ್ರದ್ಧಾಂಜಲಿ ಸಭೆ

error: Content is protected !!
Scroll to Top