ಕಾಂಗ್ರೆಸ್, ಬಿಜೆಪಿ ಪಕ್ಷಗಳು ನಾಟಕವಾಡುತ್ತಿವೆ: ಮುತಾಲಿಕ್ ► ಮುಂಬರುವ ಚುನಾವಣೆಯಲ್ಲಿ ಶ್ರೀರಾಮಸೇನೆಯು ಶಿವಸೇನೆಯ ಜೊತೆಗೂಡಿ ಸ್ಪರ್ಧೆ

(ನ್ಯೂಸ್ ಕಡಬ) newskadaba.com ಉಡುಪಿ, ಫೆ.26. ಚುನಾವಣೆ ಬರುವಾಗ ಹಿಂದುತ್ವದ ಆಧಾರದಲ್ಲಿ ಮತಯಾಚಿಸುತ್ತಾರೆ. ಅಧಿಕಾರದಲ್ಲಿದ್ದಾಗ ಗೋ ಹತ್ಯೆ ನಿಷೇಧ ಮಾಡಿಲ್ಲ. ಇವರದ್ದು ಯಾವ ರೀತಿಯ ಹಿಂದುತ್ವ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಅವರು ದರ್ಗಾ ಮಸೀದಿಗೆ ಹೋದರೆ ಸಾಕಾಗುವುದಿಲ್ಲ. ದೇವಾಲಯಗಳಿಗೂ ಹೋಗಬೇಕು ಎನ್ನುವುದು ಕಾಂಗ್ರೆಸ್‌ಗೆ ಈಗ ಗೊತ್ತಾಗಿದ್ದು, ಅವರ ಈ ನಾಟಕ ನಡೆಯಲ್ಲ ಎಂದು ಕಾಂಗ್ರೆಸ್ ಪಕ್ಷವನ್ನೂ ಜರೆದಿದ್ದಾರೆ. ಗೌರಿ ಹತ್ಯೆಯ ಆರೋಪಿಗಳೆಂದು ಅಮಾಯಕರನ್ನು ಬಂಧಿಸಿ ಶಿಕ್ಷೆ ನೀಡಲಾಗುತ್ತಿದ್ದು, ಇದು ರಾಜ್ಯ ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದರು. ಹಿಂದುತ್ವಕ್ಕಾಗಿ ದುಡಿದ ಮುತಾಲಿಕ್ ಬಿಜೆಪಿಗೆ ಬೇಡವಾಗಿದ್ದಾರೆ. ಆದರೆ ಎಸ್.ಎಂ ಕೃಷ್ಣ ಇವರಿಗೆ ಬೇಕಾಗಿದ್ದಾರೆ. ಬಿಜೆಪಿಗೆ ಶ್ರೀರಾಮ ಸೇನೆಯು ಉತ್ತರ ನೀಡಲಿದ್ದು, ನಾವು ಹಿಂದುತ್ವದ ಮೂಲಕ ಅಧಿಕಾರಕ್ಕೇರಲಿದ್ದೇವೆ. ಅದಕ್ಕಾಗಿ 5 ವರ್ಷ ರಾಜ್ಯದಲ್ಲಿ ಶ್ರೀ ರಾಮಸೇನೆಯು ಶಿವಸೇನೆ ಜೊತೆ ಕೈ ಜೋಡಿಸಲಿದೆ. 52 ಕ್ಷೇತ್ರದಲ್ಲಿ ಸ್ಪರ್ಧಿಸುವ ಬಗ್ಗೆ ನಿರ್ಧರಿಸಲಾಗಿದೆ ಎಂದರು.

Also Read  ಸ್ವ ಉದ್ಯೋಗದಿಂದ ಯಶಸ್ವಿ ಕಂಡ ಸಹೋದರರು ➤ ಇತರರಿಗೆ ಮಾದರಿಯಾದ ಸವಣೂರಿನ ಯುವಕರು

error: Content is protected !!
Scroll to Top