ಮಂಗಳೂರು: ಮಹಾತ್ಮ ಗಾಂಧೀಜಿ ಶಿಲಾನ್ಯಾಸ ನೆರವೇರಿಸಿದ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಠಮಿ ಆಚರಣೆ

(ನ್ಯೂಸ್ ಕಡಬ) newskadaba.c0m ಮಂಗಳೂರು, ಆ. 27.  ದಶಕಗಳ ಹಿಂದೆ ಮಹಾತ್ಮಾ ಗಾಂಧೀಜಿಯವರು ನಗರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಶಿಲಾನ್ಯಾಸ ನೆರವೇರಿಸಿದ ಶಾಲೆಯೊಳಗಿನ ಕೃಷ್ಣ ಮಂದಿರದಲ್ಲಿ ಸೋಮವಾರ ಮಕ್ಕಳು ಕೃಷ್ಣ ಜನ್ಮಾಷ್ಟಮಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

ಸ್ವಾತಂತ್ರ್ಯ ಹೋರಾಟದ ಭಾಗವಾಗಿ ಮಹಾತ್ಮಾ ಗಾಂಧಿಯವರು ಮಂಗಳೂರಿಗೆ 1920, 1927 ಮತ್ತು 1934ರಲ್ಲಿ ಮೂರು ಬಾರಿ ಭೇಟಿ ನೀಡಿದ್ದರು. ಫೆಬ್ರವರಿ 24, 1934 ರಂದು ಮಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಗಾಂಧೀಜಿ ಅವರು ಮಂಗಳೂರಿನ ಡೊಂಗರಕೇರಿಯ ಕೆನರಾ ಲೋಯರ್ ಪ್ರೈಮರಿ ಕನ್ನಡ ಮಾಧ್ಯಮ ಶಾಲೆಗೆ ಹೊಂದಿಕೊಂಡಂತೆ ಕೃಷ್ಣ ಮಂದಿರಕ್ಕೆ ಅಡಿಪಾಯ ಹಾಕಿದರು. ಗಾಂಧೀಜಿ ಅನಾವರಣಗೊಳಿಸಿದ ಫಲಕವನ್ನು ಶಾಲೆಯ ಗೋಡೆಯ ಮೇಲೆ ಇಂದಿಗೂ ಕಾಣಬಹುದು. ವಿದ್ಯಾರ್ಥಿನಿ ವಸುಂಧರಾ ಶೆಣೈ ಮಾತನಾಡಿ, ‘ಮಹಾತ್ಮ ಗಾಂಧಿಯವರು ನಮ್ಮ ಶಾಲೆಗೆ ಭೇಟಿ ನೀಡಿ ಕೃಷ್ಣ ಮಂದಿರಕ್ಕೆ ಅಡಿಗಲ್ಲು ಹಾಕಿದ್ದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ’ ಎಂದರು.

Also Read  ಬೆಂಗಳೂರು-ಮಂಗಳೂರು ರೈಲು ಸೇವೆ ಮತ್ತೆ ಆರಂಭ

error: Content is protected !!
Scroll to Top