ಕುಸಿದುಬಿದ್ದ ಛತ್ರಪತಿ ಮಹಾರಾಜರ ಬೃಹತ್ ಪ್ರತಿಮೆ- ತನಿಖೆಗೆ ಆದೇಶ

(ನ್ಯೂಸ್ ಕಡಬ) newskadaba.com ಮುಂಬೈ, ಆ. 27. ಭಾರೀ ಗಾಳಿ, ಮಳೆಯ ನಡುವೆ ಸಿಂಧುದುರ್ಗ ಜಿಲ್ಲೆಯ ಛತ್ರಪತಿ ಶಿವಾಜಿ ಮಹಾರಾಜರ ಬೃಹತ್‌ ಪ್ರತಿಮೆ ಕುಸಿದು ಬಿದ್ದಿದ್ದು, ಇದಾದ ಕೆಲವೇ ಗಂಟೆಗಳ ಬಳಿಕ ಭಾರತೀಯ ನೌಕಾಪಡೆಗೆ ತನಿಖೆಗೆ ಆದೇಶಿಸಲಾಗಿದೆ.

ಈ ನಡುವೆ ಗುತ್ತಿಗೆದಾರ ಮತ್ತು ರಚನಾತ್ಮಕ ಸಲಹೆಗಾರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಏಕಾಏಕಿ ಸುಮಾರು 35 ಅಡಿ ಎತ್ತರದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಪತನಗೊಂಡಿದ್ದು, ಭಾರೀ ಆತಂಕ ಮೂಡಿಸಿತ್ತು. ಇದೀಗ ಗುತ್ತಿಗೆದಾರ ಜಯದೀಪ್‌ ಆಪ್ಟೆ ಮತ್ತು ರಚನಾತ್ಮಕ ಸಲಹೆಗಾರ ಚೇತನ್‌ ಪಾಟೀಲ್‌ ವಿರುದ್ಧ ಸ್ಥಳೀಯ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಕಡಲ ತೀರ ಸಮೀಪವೇ 8 ತಿಂಗಳ ಹಿಂದೆಯಷ್ಟೇ ನೌಕಾಪಡೆಯ ದಿನದಂದು ಪ್ರತಿಮೆ ಅನಾವರಣಗೊಂಡಿತ್ತು. ಈಗ ಅದು ಮುರಿದು ಬಿದ್ದಿರುವ ಹಿನ್ನೆಲೆ ಘಟನೆಯ ಕುರಿತು ತನಿಖೆ ಮಾಡುವುದಾಗಿ ಭಾರತೀಯ ನೌಕಾಪಡೆ ಹೇಳಿದೆ. ರಾಜ್ಯ ಸರ್ಕಾರ ಮತ್ತು ಸಂಬಂಧಪಟ್ಟ ತಜ್ಞರ ನೆರವನ್ನೂ ಪಡೆಯಲಿದ್ದೇವೆ. ಈಗಾಗಲೆ ವಿಶೇಷ ತಂಡವನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!

Join the Group

Join WhatsApp Group