ಮಳೆಯ ಆರ್ಭಟಕ್ಕೆ ಅಣೆಕಟ್ಟು ಒಡೆದು 60 ಜನರ ಸಾವು..!  ಹಲವು ಮಂದಿ ನಾಪತ್ತೆ..!                        

(ನ್ಯೂಸ್ ಕಡಬ) newskadaba.c0m ಸುಡಾನ್, ಆ. 27.  ಯುದ್ಧ ಪೀಡಿತ ಸುಡಾನ್‌ ನಲ್ಲಿ ಭಾರೀ ಮಳೆಗೆ ಅಣೆಕಟ್ಟು ಒಡೆದು ಕನಿಷ್ಠ 60 ಜನರು ಸಾವನ್ನಪ್ಪಿದ್ದು, ಹಲವು ಮಂದಿ ನಾಪತ್ತೆಯಾದ ಘಟನೆ ಸಂಭವಿಸಿದೆ. ವ್ಯಾಪಕ ಮಳೆಗೆ ಕೆಂಪು ಸಮುದ್ರದ ಸಮೀಪದಲ್ಲಿದ್ದ ಅರ್ಬತ್ ಅಣೆಕಟ್ಟು ಕೊಚ್ಚಿಹೋಗಿದ್ದು, 20 ಕ್ಕೂ ಹೆಚ್ಚು ಹಳ್ಳಿಗಳಿಗೆ ನೀರು ನುಗ್ಗಿದ್ದು 50 ಸಾವಿರು ಮನೆಗಳು ಕೊಚ್ಚಿ ಹೋಗಿದೆ ಎಂದು ವರದಿಯಾಗಿದೆ.

ಅರ್ಬತ್ ಅಣೆಕಟ್ಟು 25 ಮಿಲಿಯನ್ ಕ್ಯೂಬಿಕ್ ಮೀಟರ್ ಸಾಮರ್ಥ್ಯವನ್ನು ಹೊಂದಿತ್ತು. ಪೋರ್ಟ್ ಸುಡಾನ್‌ ನ ಕುಡಿಯುವ ನೀರಿನ ಮೂಲವಾಗಿತ್ತು. ಕೊಚ್ಚಿಕೊಂಡು ಹೋದ ಪ್ರದೇಶವನ್ನು ಗುರುತಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಚಿನ್ನದ ಗಣಿಯಲ್ಲಿ ಕೆಲಸ ಮಾಡುತ್ತಿದ್ದ 150 ರಿಂದ 200 ಮಂದಿ ಕಾಣೆಯಾಗಿದ್ದಾರೆ ಎನ್ನಲಾಗಿದೆ.

Also Read  ಕರುವಿನ ವಿಚಾರವಾಗಿ ಮಾತಿನ ಚಕಮಕಿ- ಹಲ್ಲೆ ➤ ಮೂವರಿಗೆ ಗಾಯ

 

error: Content is protected !!
Scroll to Top