(ನ್ಯೂಸ್ ಕಡಬ) newskadaba.c0m ಸುಳ್ಯ, ಆ. 26. ಆಲೆಟ್ಟಿ ಗ್ರಾಮದ ಕುಕ್ಕುಂಬಳ ಸೇತುವೆಯಿಂದ ಆಟೋ ರಿಕ್ಷಾ ಬಿದ್ದಿದ್ದು, ಚಾಲಕ ಪವಾಡ ಸದೃಶ ರೀತಿಯಲ್ಲಿ ಪಾರಾದ ಘಟನೆ ನಡೆದಿದೆ.
ಚಾಲಕ ವೇಣುಗೋಪಾಲ ದೇವಮೂಲೆ ಗಂಭೀರ ಗಾಯದಿಂದ ಪಾರಾಗಿದ್ದು, ದೇವಮೂಲೆಯಲ್ಲಿ ಪ್ರಯಾಣಿಕರೊಬ್ಬರನ್ನು ಇಳಿಸಿ ಪೆರಾಜೆ ಕಡೆಗೆ ವಾಪಸಾಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಘಟನೆಯಿಂದಾಗಿ ಆಟೋ ರಿಕ್ಷಾ ಜಖಂಗೊಂಡಿದೆ. ಸೇತುವೆಯ ಕೆಳಗಿನಿಂದ ಆಟೋವನ್ನು ಮೇಲಕ್ಕೆತ್ತಲು ಪ್ರಯತ್ನಿಸಲಾಗುತ್ತಿದ್ದು, ಅದೃಷ್ಟವಶಾತ್ ನೀರಿನ ಮಟ್ಟ ಕಡಿಮೆ ಇದ್ದ ಕಾರಣ ಸಂಭವನೀಯ ಭಾರೀ ದುರಂತ ತಪ್ಪಿದೆ ಎಂದು ವರದಿಯಾಗಿದೆ.
Also Read ಮಂಗಳೂರು:ಕೆನರಾ ಎಂಜಿನಿಯರಿಂಗ್ ಕಾಲೇಜಿನ ಅಶ್ವಿನಿ ಹೊಳ್ಳ ►ಅವರಿಗೆ ಐಇಇಇ ಅತ್ಯುತ್ತಮ ಘಟಕ ಕೌನ್ಸಿಲರ್ ಗೌರವ