ಸರ್ವೆ: ಮನೆಯ ಕಿಟಕಿ ಮುರಿದು ನಗ-ನಗದು ಕಳವು

Theft, crime, Robbery

(ನ್ಯೂಸ್ ಕಡಬ) newskadaba.com ಪುತ್ತೂರು, ಆ. 24. ಮನೆಯೊಂದಕ್ಕೆ ನುಗ್ಗಿದ ಕಳ್ಳರು ಚಿನ್ನಾಭರಣ ದೋಚಿದ ಘಟನೆ ಸರ್ವೆ ಗ್ರಾಮದ ಕಾಡಬಾಗಿಲು ಎಂಬಲ್ಲಿ ನಡೆದಿದೆ.

ಕಾಡಬಾಗಿಲು ನಿವಾಸಿ ಸಾರಮ್ಮ ಎಂಬವರು ತನ್ನ ಸೊಸೆ ಜೊತೆ ಮೊಮ್ಮಗನನ್ನು ಔಷಧಿಗೆಂದು ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋದವರು, ತನ್ನ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದರು. ಮರುದಿನ ಮನೆಗೆ ಮರಳಿಬಂದಾಗ ಮನೆಯಲ್ಲಿ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಮನೆಯ ಬಾಗಿಲನ್ನು ಮುರಿಯಲೆತ್ನಿಸಿದ ಕಳ್ಳರಿಗೆ ಅದು ಅಸಾಧ್ಯವಾದಾಗ ಕಿಟಕಿಯ ಸರಳನ್ನು ಮುರಿದು ಒಳನುಗ್ಗಿದ ಕಳ್ಳರು ಮನೆಯ ಕೋಣೆಯಲ್ಲಿದ್ದ ಕಪಾಟಿನಿಂದ 3 ಪವನ್ ಚಿನ್ನ, 35 ಸಾವಿರ ರೂ. ನಗದು ಹಾಗೂ ಇನ್ನಿತರ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳತನ ನಡೆದಿರುವುದರಿಂದ ಮನೆ ಬಗ್ಗೆ ಮಾಹಿತಿ ಇರುವವರೇ ಈ ಕೃತ್ಯವೆಸಗಿರಬಹುದು ಎಂದು ಶಂಕಿಸಲಾಗಿದೆ.

Also Read  ಉಡುಪಿಯ ಉಚ್ಚಿಲದಲ್ಲಿ ಕಾರುಗಳು ಮುಖಾಮುಖಿ ಡಿಕ್ಕಿ ➤ ಓರ್ವ ಗಂಭೀರ..!

error: Content is protected !!
Scroll to Top