ಸುಳ್ಯ: ಕೆರೆಗೆ ಬಿದ್ದು ಕೃಷಿಕ ಮೃತ್ಯು

(ನ್ಯೂಸ್ ಕಡಬ) newskadaba.com ಸುಳ್ಯ, ಆ. 24. ತೋಟಕ್ಕೆ ತೆಂಗಿನಕಾಯಿ ಹೆಕ್ಕಲು ಹೋಗಿದ್ದ ಕೃಷಿಕರೊಬ್ಬರು ಕೆರೆಗೆ ಜಾರಿ ಬಿದ್ದು ಮೃತಪಟ್ಟ ಘಟನೆ ಮಡಪ್ಪಾಡಿ ಗ್ರಾಮದಲ್ಲಿ ನಡೆದಿದೆ.

 

ಮೃತಪಟ್ಟವರನ್ನು ಮಡಪ್ಪಾಡಿ ಗ್ರಾಮದ ವಿಶ್ವನಾಥ ಗೋಳ್ಯಾಡಿ (60) ಎಂದು ಗುರುತಿಸಲಾಗಿದೆ. ತೆಂಗಿನಕಾಯಿ ಹೆಕ್ಕಲೆಂದು ತೋಟಕ್ಕೆ ಹೋಗಿದ್ದ ವಿಶ್ವನಾಥರವರು ಮಧ್ಯಾಹ್ನದವರೆಗೆ ಬಾರದೇ ಇದ್ದಾಗ ಮನೆಯವರು ಹುಡುಕಾಡಿದಾಗ ತೆಂಗಿನಕಾಯಿ ತರಲೆಂದು ತೆಗೆದುಕೊಂಡು ಹೋಗಿದ್ದ ಕೈಗಾಡಿ ಕೆರೆಯ ಬಳಿ ಪತ್ತೆಯಾಗಿದೆ. ಪಕ್ಕದ ಕೆರೆಯಲ್ಲಿ ನೋಡಿದಾಗ ವಿಶ್ವನಾಥರ ಮೃತದೇಹ ತೇಲುತ್ತಿರುವುದು ಕಂಡು ಬಂದಿದೆ. ಸ್ಥಳೀಯರು ಸೇರಿ ಕೆರೆಯಿಂದ ಮೃತದೇಹವನ್ನು ಮೇಲಕ್ಕೆತ್ತುವ ವೇಳೆಗೆ ಕೊನೆಯುಸಿರೆಳೆದ್ದರು. ಈ ಕುರಿತು ಸುಳ್ಯ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

error: Content is protected !!