‘ನಮ್ಮ ಮೆಟ್ರೋ’ದಲ್ಲಿ ಉದ್ಯೋಗಾವಕಾಶ- ಆಸಕ್ತರಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 17. ನಮ್ಮ ಮೆಟ್ರೋದಲ್ಲಿ ಖಾಲಿ ಇರುವ 58 ಅಸಿಸ್ಟಂಟ್‌ ಸೆಕ್ಯೂರಿಟಿ ಆಫೀಸರ್‌ ಹುದ್ದೆಗಳ ಭರ್ತಿಗೆ ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ಅರ್ಜಿ ಆಹ್ವಾನಿಸಿದೆ. ಆಸಕ್ತರು ಆನ್‌ಲೈನ್‌ ಮತ್ತು ಆಫ್‌ಲೈನ್‌ ಮುಖಾಂತರ ಅರ್ಜಿ ಸಲ್ಲಿಸಬೇಕಿದ್ದು, ಸೆಪ್ಟೆಂಬರ್ 9 ಕೊನೆಯ ದಿನವಾಗಿದೆ.

 

ಹುದ್ದೆಗಳ ವಿವರ ಮತ್ತು ಅರ್ಹತೆ

ಅಸಿಸ್ಟೆಂಟ್ ಸೆಕ್ಯೂರಿಟಿ ಆಫೀಸರ್‌ ಹುದ್ದೆ ಇದಾಗಿದ್ದು, ಜೂನಿಯರ್ ಕಮಿಷನ್ಡ್ ಶ್ರೇಣಿಯಲ್ಲಿ ಸೇವೆಯಲ್ಲಿರುವ ಅಥವಾ ನಿವೃತ್ತ ಸಿಬ್ಬಂದಿ, ಅಧಿಕಾರಿ / ಸುಬೇದಾರ್ ಮೇಜರ್ / ಸುಬೇದಾರ್ / ಮಾಸ್ಟರ್ ಚೀಫ್ ಪೆಟ್ಟಿ, ಆಫೀಸರ್ / ಮಾಸ್ಟರ್ ವಾರಂಟ್ ಆಫೀಸರ್ / ವಾರಂಟ್ ಆಫೀಸರ್ ಅಥವಾ ತತ್ಸಮಾನ, ರಕ್ಷಣಾ ಸೇವೆಯಲ್ಲಿ ಇದ್ದವರು, ಇನ್ಸ್‌ಪೆಕ್ಟರ್‌ / ಸಬ್ ಇನ್ಸ್‌ಪೆಕ್ಟರ್‌ / ಎಎಸ್‌ಐ ಅಥವಾ ತತ್ಸಮಾನ ಶ್ರೇಣಿಯ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದವರು ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ವಯೋಮಿತಿ
ಗರಿಷ್ಠ ವಯೋಮಿತಿ 62 ವರ್ಷ. ಇದು ಗುತ್ತಿಗೆ ಆಧಾರಿತ ಉದ್ಯೋಗವಾಗಿದ್ದು, 60 ವರ್ಷಕ್ಕಿಂತ ಕೆಳಗಿರುವವರನ್ನು 3 ವರ್ಷಕ್ಕೆ ಮತ್ತು 60 ವರ್ಷಕ್ಕಿಂತ ಮೇಲಿರುವವರನ್ನು 1 ವರ್ಷಕ್ಕೆ ನೇಮಕ ಮಾಡಿಕೊಳ್ಳಲಾಗುತ್ತದೆ. ಉದ್ಯೋಗ ನಿರ್ವಹಿಸುವ ರೀತಿಯನ್ನು ನೋಡಿಕೊಂಡು ಗುತ್ತಿಗೆ ಮುಂದುವರಿಸುವ ಬಗ್ಗೆ ನಿರ್ಧರಿಸಲಾಗುತ್ತದೆ.

Also Read  2022-23 ಸಾಲಿನ ಬ್ಯಾಂಕ್ ಗಳ ಗೃಹ ಸಾಲದ ಬಡ್ಡಿ ದರದಲ್ಲಿ ಏರಿಕೆ

ಆಯ್ಕೆ ವಿಧಾನ ಮತ್ತು ಮಾಸಿಕ ವೇತನ
ದೈಹಿಕ ಪರೀಕ್ಷೆ, ಅರ್ಹತೆ, ದಾಖಲಾತಿ ಪರಿಶೀಲನೆ ಮತ್ತು ಸಂದರ್ಶನದ ಮೂಲಕ ಅರ್ಹರನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ 60 ವರ್ಷದೊಳಗಿನವರಿಗೆ 32,950 ರೂ. ಮತ್ತು 60 ವರ್ಷ ದಾಟಿದವರಿಗೆ 30,000 ರೂ. ಮಾಸಿಕ ವೇತನ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ (projectrecruit.bmrc.co.in)
ಅರ್ಜಿದಾರರು ಆನ್‌ಲೈನ್ ಅರ್ಜಿ ನಮೂನೆಯ ಹಾರ್ಡ್ ಪ್ರತಿಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು:
General Manager (HR), Bangalore Metro Rail Corporation Limited, III Floor, BMTC Complex, K.H Road, Shanthinagar, Bengaluru – 560027.

Also Read  ವಿವಾಹಿತ ಮಹಿಳೆ ಆತ್ಮಹತ್ಯೆ

ಗಮನಿಸಿ, ನಿಮ್ಮ ಅಪ್ಲಿಕೇಷನ್ ಸ್ಪೀಡ್‌ ಪೋಸ್ಟ್‌ / ಕೊರಿಯರ್‌ ಮೂಲಕ ಕಳುಹಿಸಬೇಕು. ಪೋಸ್ಟ್ ಮಾಡುವಾಗ ಮೇಲ್ಭಾಗದಲ್ಲಿ “APPLICATION FOR THE POST OF ASSISTANT SECURITY OFFICER” ಎಂದು ನಮೂದಿಸುವುದನ್ನು ಮರೆಯಬೇಡಿ.

ಹೆಚ್ಚಿನ ವಿವರಗಳಿಗೆ ಅಧಿಕೃತ ವೆಬ್‌ಸೈಟ್‌ ವಿಳಾಸ: english.bmrc.co.inಗೆ ಭೇಟಿ ನೀಡಿ ಅಥವಾ ಇಮೇಲ್‌ ವಿಳಾಸ: helpdesk@bmrc.co.inಗೆ ಸಂಪರ್ಕಿಸಿ.

error: Content is protected !!