(ನ್ಯೂಸ್ ಕಡಬ) newskadaba.c0m ಮಂಗಳೂರು, ಆ. 17. ಸಾಫ್ಟ್ ವೇರ್ ಕಂಪೆನಿಗಳಲ್ಲಿ ಉದ್ಯೋಗವಿದೆ ಎಂದು ಭಾರತೀಯ ಸಮುದಾಯದ ಉದ್ಯೋಗಾಕಾಂಕ್ಷಿಗಳನ್ನೇ ಟಾರ್ಗೆಟ್ ಮಾಡಿ ಬಲೆ ಬೀಸುವ ಕಾಂಬೋಡಿಯಾದ ಸೈಬರ್ ಅಪರಾಧಿಗಳು ಭಾರತೀಯರನ್ನು ಬಳಸಿಕೊಂಡು ಭಾರತೀಯರನ್ನೇ ದೋಚುತ್ತಿದ್ದಾರೆ. ಈ ವಂಚನೆಯ ಜಾಲವನ್ನು ವಿದೇಶಾಂಗ ಇಲಾಖೆ ಪತ್ತೆ ಹಚ್ಚಿದೆ ಮತ್ತು ಭಾರತದ ಸುಮಾರು 250 ಮಂದಿಯನ್ನು ರಕ್ಷಣೆ ಮಾಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಸೇರಿದ್ದಾರೆ ಎಂದು ವರದಿ ತಿಳಿದುಬಂದಿದೆ.
ದ.ಕ. ಮೂಲದ ಮೂವರು ಕೆಲ ತಿಂಗಳುಗಳ ಹಿಂದೆ ಆಂಧ್ರಪ್ರದೇಶದ ಏಜೆಂಟ್ ಓರ್ವನ ಮೂಲಕ ವಿದೇಶದ ಉದ್ಯೋಗದ ಆಸೆಯಿಂದ ಕಾಂಬೋಡಿಯಾಕ್ಕೆ ತೆರಳಿದ್ದರು. ಅಲ್ಲಿ ಐಟಿ ಕಂಪೆನಿಯ ಉದ್ಯೋಗವಿದೆ ಎಂದು ಕಳುಹಿಸಿದ್ದು, ಸೈಬರ್ ವಂಚಕರ ಬಳಿ ತಲುಪುತ್ತಿದ್ದಂತೆ ಪಾಸ್‌ಪೋರ್ಟ್ ಕಿತ್ತುಕೊಂಡು, ದಿನದ 12 ಗಂಟೆ ಕಾಲ ಗುಲಾಮರಂತೆ ದುಡಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ.