ಗ್ಯಾರಂಟಿ ಯೋಜನೆಗಳಲ್ಲಿ ಪರಿಷ್ಕರಣೆ ಬಗ್ಗೆ ವದಂತಿ ‘ಗೃಹಜ್ಯೋತಿ’ ಉಚಿತ ವಿದ್ಯುತ್ ಮಿತಿ ಇಳಿಕೆಯ ಬಗ್ಗೆ ಸಚಿವರಿಂದ ಸ್ಪಷ್ಟನೆ

(ನ್ಯೂಸ್ ಕಡಬ) newskadaba.c0m ಬೆಂಗಳೂರು, ಆ. 14.  ಇನ್ನುಮುಂದೆ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಐದು ಗ್ಯಾರಂಟಿಗಳ ನಿಯಮಾವಳಿಗಳಲ್ಲಿ ಬದಲಾವಣೆ ಮಾಡಲಾಗುತ್ತೆ ಎಂಬ ವದಂತಿಗಳ ಬಗ್ಗೆ ಸಚಿವ ಕೆಎಚ್ ಮುನಿಯಪ್ಪ ಪ್ರತಿಕ್ರಿಯಿಸಿದ್ದಾರೆ.

 

ಸರಕಾರವು ಗೃಹಜ್ಯೋತಿ ಯೋಜನೆಯಡಿ ನೀಡುತ್ತಿರುವ 200 ಯೂನಿಟ್ ವಿದ್ಯುತ್ ಅನ್ನು 100 ಯೂನಿಟ್ ಗೆ ಇಳಿಸುವ ಚಿಂತನೆಯಲ್ಲಿದೆ. ಅನ್ನಭಾಗ್ಯ ಯೋಜನೆಯ ಫಲಾನುಭವಿಗಳ ಸಂಖ್ಯೆಯನ್ನು ಇಳಿಕೆ ಮಾಡಲಾಗುತ್ತದೆ, ಮನೆಯ ಯಜಮಾನಿಗೆ ಮಾಸಿಕವಾಗಿ ನೀಡುವ 2 ಸಾವಿರ ರೂ.ಗಳ ಯೋಜನೆಗೂ ಒಂದಿಷ್ಟು ಹೆಚ್ಚುವರಿ ಮಾನದಂಡ ನಿಗದಿಪಡಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಇದೆಲ್ಲಾ ವದಂತಿಗಳಿಗೆ ಉತ್ತರಿಸಿರುವ ಸಚಿವರು, ಹೌದು… ಸರ್ಕಾರದಿಂದ ನೀಡಲಾಗುತ್ತಿರುವ ಕೆಲವು ಗ್ಯಾರಂಟಿಗಳ ನಿಯಮಾವಳಿಗಳಲ್ಲಿ ಅಲ್ಪ ಸ್ವಲ್ಪ ಬದಲಾವಣೆ ತರಲಾಗುತ್ತದೆ. ರಾಜ್ಯದ ಕೆಲವು ಯೋಜನೆಗಳನ್ನು ಹಲವರು ದುರುಪಯೋಗಪಡಿಸಿಕೊಳ್ಳುತ್ತಿದ್ದು, ಗ್ಯಾರಂಟಿಗಳ ಲಾಭ ಶ್ರೀಮಂತರ ಪಾಲಾಗುತ್ತಿದೆ. ಈ ಹಿನ್ನೆಲೆ ಕೆಲವು ಗ್ಯಾರಂಟಿ ಯೋಜನೆಗಳ ನಿಯಮಾವಳಿಗಳಿಗೆ ಬದಲಾವಣೆ ತರಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.

error: Content is protected !!

Join the Group

Join WhatsApp Group