ಯುವತಿಯನ್ನು ಗ್ಯಾಂಗ್ ರೇಪ್ ಮಾಡಿ ತಡರಾತ್ರಿ ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋದ ಕಾಮುಕರು ► ಜಾತ್ರೆಗೆಂದು‌ ಕರೆಸಿ ವಂಚಿಸಿ ಅತ್ಯಾಚಾರ



(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಫೆ.16. ದಲಿತ ಯುವತಿಯ ಮೇಲೆ ಗ್ಯಾಂಗ್ ರೇಪ್ ನಡೆಸಿದ ಕಾಮುಕರು ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋದ ವಿಲಕ್ಷಣ ಘಟನೆ ಗುರುವಾರ ತಡರಾತ್ರಿ ನಡೆದಿದೆ.







ಗುರುವಾರ ರಾತ್ರಿ ಬೆಟ್ಟಂಪಾಡಿಯ ಯುವತಿಯೋರ್ವಳನ್ನು ಕರೆತಂದು ನೆಲ್ಯಾಡಿ ಬಳಿಯ ಖಾಲಿ ಮನೆಯಲ್ಲಿ ಅತ್ಯಾಚಾರ ನಡೆಸಿದ ಕಾಮುಕರು ಆ ಬಳಿಕ ತಡರಾತ್ರಿ ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಯುವತಿಯನ್ನು ಬಿಟ್ಟು ಹೋಗಿದ್ದಾರೆನ್ನಲಾಗಿದೆ. ಘಟನೆಯ ಬಗ್ಗೆ ಸಂತ್ರಸ್ಥೆ ಯುವತಿಯು ಧನಂಜಯ ಹಾಗೂ ಇನ್ನೋರ್ವ ಆರೋಪಿಯ ವಿರುದ್ಧ ಶುಕ್ರವಾರದಂದು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಉಪ್ಪಿನಂಗಡಿ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.






p

error: Content is protected !!
Scroll to Top