ನಾಳೆ (ಫೆ.17) ಪಾಪ್ಯುಲರ್ ಫ್ರಂಟ್ ಡೇ ಪ್ರಯುಕ್ತ ಸುಳ್ಯದಲ್ಲಿ ಯುನಿಟಿ ಮಾರ್ಚ್ ಹಾಗೂ ಸಮಾವೇಶ ► ರಾಷ್ಟ್ರೀಯ ಸಮಿತಿ ಸದಸ್ಯ ಕೆ.ಎಂ. ಶರೀಫ್ ಸುಳ್ಯಕ್ಕೆ

ಸಾಂದರ್ಭಿಕ ಚಿತ್ರ

(ನ್ಯೂಸ್ ಕಡಬ) newskadaba.com ಸುಳ್ಯ, ಫೆ.16. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ 11 ನೇ ವರ್ಷಾಚರಣೆಯ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಅಪರಾಹ್ನ 2.30 ಕ್ಕೆ ಯುನಿಟಿ ಮಾರ್ಚ್ ಹಾಗೂ ಸಂಜೆ 3.30 ಕ್ಕೆ ಬೃಹತ್ ಸಾರ್ವಜನಿಕ ಸಭೆಯು ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಸಿನ್ ಹಸನ್ ವಹಿಸಲಿದ್ದು, ರಾಷ್ಟ್ರೀಯ ಸಮಿತಿ ಸದಸ್ಯರಾದ ಕೆ.ಎಂ. ಶರೀಫ್ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಜ್ಞಾನ ಪ್ರಕಾಶ ಸ್ವಾಮೀಜಿ ಮೈಸೂರು, ಎಸ್ಡಿಪಿಐ ಉಪಾಧ್ಯಕ್ಷರಾದ ಅಬ್ದುಲ್ ಮಜೀದ್ ಕೊಡ್ಲಿಪೇಟೆ, ಶಫೀಕ್ ಖಾಸಿಮಿ ಕೇರಳ ಹಾಗೂ ಇನ್ನಿತರ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸುಳ್ಯ ತಾಲೂಕು ಸಮಿತಿಯು ಪ್ರಕಟನೆಯಲ್ಲಿ ತಿಳಿಸಿದೆ.

Also Read  ಪಂಜ: ಕೆಎಸ್ಸಾರ್ಟಿಸಿ ಬಸ್ ಹಾಗೂ ಬೈಕ್ ನಡುವೆ ಢಿಕ್ಕಿ ➤ ಸುಬ್ರಹ್ಮಣ್ಯ ಕಾಲೇಜಿನ ಗುಮಾಸ್ತ ಮೃತ್ಯು

error: Content is protected !!
Scroll to Top